ಮಸಾಲಾ ಚಹಾಏಲಕ್ಕಿ, ಲವಂಗ, ದಾಲ್ಚಿನ್ನಿ, ಶುಂಠಿ, ಕಾಳುಮೆಣಸು, ತುಳಸಿ – ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಚಹಾ ಮಾಡಿ ಕುಡಿಯುವುದರಿಂದ ಚಳಿಗಾಲದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬಹುದು..ಶುಂಠಿ ಚಹಾತಾಜಾ ಶುಂಠಿಯನ್ನು ನೀರಿನಲ್ಲಿ ನೆನಸಿ ಅದಕ್ಕೆ 8 ತುಳಸಿ ಎಲೆ, ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದುಸಿ ಕುಡಿಯುವುದರಿಂದ ಜ್ವರ, ಗಂಟಲು ಕೆರೆತ ಎಲ್ಲಾ ಮಾಯವಾಗುತ್ತದೆ..ಕೇಸರಿ–ಬಾದಾಮಿ ಹಾಲುರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಕೇಸರಿ ಮಿಶ್ರಿತ ಬಾದಾಮಿ ಹಾಲನ್ನು ಕುಡಿಯುವುದರಿಂದ ಚೆನ್ನಾಗಿ ನಿದ್ರೆಯನ್ನು ಮಾಡಬಹುದು. ಇದು ದೇಹವನ್ನು ಒಳಗಿನಿಂದ ಬೆಚ್ಚಗಿರಿಸುತ್ತದೆ..ಲೆಮನ್ ಟೀನಿಂಬೆ ರಸ ಮತ್ತು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಇದು ದೇಹಕ್ಕೆ ಇಮ್ಯೂನಿಟಿ ಬೂಸ್ಟ್ನ್ನು ನೀಡುತ್ತದೆ. ಜೊತೆಗೆ ಚಳಿಗೆ ಒಳ್ಳೆ ರಿಲೀಫ್ ಆಗುತ್ತದೆ..ರಾಗಿ ಕಾಳುಮೆಣಸು ಗಂಜಿರಾಗಿ ಹಿಟ್ಟು, ಕಾಳು ಮೆಣಸಿನ ಪುಡಿ, ಬೆಲ್ಲ ಮತ್ತು ಏಲಕ್ಕಿ ಸೇರಿಸಿ ಪಾನಕ ಮಾಡಿ ಕುಡಿಯುವುದರಿಂದ ಇದು ಚಳಿಯನ್ನು ಹೋಗಲಾಡಿಸುತ್ತದೆ.