ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ನಮ್ಮಲ್ಲಿ ಹೆಚ್ಚಿನವರ ಅಭ್ಯಾಸ. ಆದರೆ, ಈ ರೀತಿಯಂತಹ ಅಭ್ಯಾಸವು ಆರೋಗ್ಯವನ್ನು ಹಾಳು ಮಾಡಬಹುದು ಎಂದು ತಜ್ಞರು ವಿವರಿಸುತ್ತಾರೆ.
ಅಸಿಡಿಟಿ ಮತ್ತು ಎದೆಯುರಿ
ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲದ (Acid) ಸಮತೋಲನ ತಪ್ಪುತ್ತದೆ. ಇದು ತೀವ್ರ ಅಸಿಡಿಟಿ, ಎದೆಯುರಿ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.
ಜೀರ್ಣಕ್ರಿಯೆಗೆ ಅಡ್ಡಿ
ಚಹಾದಲ್ಲಿರುವ ಟ್ಯಾನಿನ್ ಎಂಬ ಅಂಶವು ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವಾಕರಿಕೆ ಬಂದಂತಾಗುವುದು ಅಥವಾ ವಾಂತಿಯಾಗುವ ಸಾಧ್ಯತೆ ಇರುತ್ತದೆ.
ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿ
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹವು ಆಹಾರದಿಂದ ಕಬ್ಬಿಣಾಂಶ ಮತ್ತು ಇತರ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತಹೀನತೆಗೆ ದಾರಿ ಮಾಡಿಕೊಡಬಹುದು.
ನಿರ್ಜಲೀಕರಣ
ಚಹಾವು ನೈಸರ್ಗಿಕವಾಗಿ ಮೂತ್ರವರ್ಧಕ ಗುಣವನ್ನು ಹೊಂದಿದೆ. ಬೆಳಿಗ್ಗೆ ದೇಹಕ್ಕೆ ನೀರಿನ ಅವಶ್ಯಕತೆ ಇರುವಾಗ ಚಹಾ ಸೇವಿಸಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗಬಹುದು.
ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಕೆ
ಚಹಾದಲ್ಲಿ ಸಕ್ಕರೆ ಮತ್ತು ಕೆಫೀನ್ ಇರುವುದರಿಂದ, ಇದು ಖಾಲಿ ಹೊಟ್ಟೆಯಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ತಕ್ಷಣವೇ ಹೆಚ್ಚಿಸಬಹುದು, ಇದು ದೀರ್ಘಾವಧಿಯಲ್ಲಿ ಮಧುಮೇಹಿಗಳಿಗೆ ಅಪಾಯಕಾರಿ.