ಮೊಟ್ಟೆಗಳು ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಅವು ಉತ್ತಮ ಗುಣಮಟ್ಟದ ಪ್ರೋಟೀನ್, ವಿಟಮಿನ್ ಡಿ, ಅಗತ್ಯ ಅಮೈನೋ ಆಮ್ಲಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತವೆ. ಪ್ರತಿದಿನ ಇವುಗಳ ಸೇವನೆಯು ಸ್ನಾಯುಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
ಮಾಂಸದೊಂದಿಗೆ ಮೊಟ್ಟೆಗಳನ್ನು ಸೇವಿಸಬೇಡಿ
ಮೊಟ್ಟೆ ಮತ್ತು ಮಾಂಸದಲ್ಲಿ ಪ್ರೋಟೀನ್ ಮತ್ತು ಕೊಬ್ಬು ಅಧಿಕವಾಗಿರುವುದರಿಂದ, ಈ ಸಂಯೋಜನೆಯು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಇದರಿಂದ ಹೊಟ್ಟೆ ನೋವು, ಅಜೀರ್ಣದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮೊಟ್ಟೆಯೊಂದಿಗೆ ಚಹಾ ಸೇವಿಸಬೇಡಿ
ಮೊಟ್ಟೆಯೊಂದಿಗೆ ಚಹಾ ಸೇವಿಸುವುದರಿಂದ ಇದು ಚಹಾದಲ್ಲಿರುವ ಕೆಲವು ಸಂಯುಕ್ತಗಳು ಸರಿಯಾದ ಪ್ರೋಟೀನ್ ಹೀರಿಕೊಳ್ಳುವಿಕೆಯನ್ನು ತಡೆಯುತ್ತವೆ. ಇದರಿಂದ ಗ್ಯಾಸ್, ಹೊಟ್ಟೆ ನೋವು ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
ಮೊಟ್ಟೆ ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸಬೇಡಿ
ಮೊಟ್ಟೆ ಮತ್ತು ಬಾಳೆಹಣ್ಣುಗಳು ಪೌಷ್ಟಿಕಾಂಶಯುಕ್ತವಾಗಿವೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಆಹಾರವನ್ನುಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.
ಸೋಯಾ ಹಾಲಿನೊಂದಿಗೆ ಮೊಟ್ಟೆ ಸೇವಿಸಬೇಡಿ
ಸೋಯಾ ಹಾಲಿನಲ್ಲಿ ಹೇರಳವಾದ ಪೌಷ್ಟಿಕಾಂಶಗಳು ಇರುತ್ತವೆ. ಇದನ್ನು ಮೊಟ್ಟೆಯೊಂದಿಗೆ ಸೇವಿಸುವುದರಿಂದ ಇದು ಜೀರ್ಣಕ್ರಿಯೆ ಮತ್ತು ಪ್ರೋಟೀನ್ ಹೀರಿಕೊಳ್ಳುವಿಕೆಯಲ್ಲಿ ಸಮಸ್ಯೆ ಉಂಟಾಗಬಹುದು.
ಮೊಟ್ಟೆಗಳೊಂದಿಗೆ ಸಕ್ಕರೆ ಸೇವಿಸಬೇಡಿ
ಮೊಟ್ಟೆಗಳೊಂದಿಗೆ ಸಕ್ಕರೆಯನ್ನು ತಿನ್ನುವುದು ಹಾನಿಕಾರಕವಾಗಿದೆ. ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಇದು ದೇಹದಲ್ಲಿ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.