ಪ್ರತಿದಿನ ಕೇಸರಿ ನೀರು ಕುಡಿದ್ರೆ ಏನಾಗುತ್ತೆ ಗೊತ್ತಾ? Saffron Water Benefits

ಕೇಸರಿ ನೀರು
ಕೇಸರಿ ನೀರು
Published on
Saffron Water Benefits

ಕೇಸರಿ ನೀರು

ಕೇಸರಿ ಕೇವಲ ತನ್ನ ಸುವಾಸನೆ ಮತ್ತು ಬಣ್ಣಕ್ಕೆ ಮಾತ್ರವಲ್ಲ, ಅದ್ಭುತವಾದ ಔಷಧೀಯ ಗುಣಗಳಿಗೂ ಹೆಸರಾಗಿದೆ. ಪ್ರತಿದಿನ ನಿಯಮಿತವಾಗಿ ಉಗುರುಬೆಚ್ಚಗಿನ ನೀರಿಗೆ 2-3 ಕೇಸರಿ ಎಳೆಗಳನ್ನು ಹಾಕಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
Saffron Water Benefits

ಚರ್ಮದ ಕಾಂತಿ ಮತ್ತು ಆರೋಗ್ಯ ವೃದ್ಧಿ

ಕೇಸರಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿನ ಕಸ ಅಥವಾ ಕಲ್ಮಶಗಳು ಹೊರಹೋಗುತ್ತವೆ. ಇದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮುಖದ ಮೇಲಿನ ಕಲೆಗಳು, ಮೊಡವೆಗಳು ಕಡಿಮೆಯಾಗಿ ಚರ್ಮವು ನೈಸರ್ಗಿಕವಾಗಿ ಹೊಳೆಯಲು ಮತ್ತು ಮೃದುವಾಗಲು ಪ್ರಾರಂಭಿಸುತ್ತದೆ.
Saffron Water Benefits

ಮಾನಸಿಕ ಒತ್ತಡ ನಿವಾರಣೆ

ಕೇಸರಿಯನ್ನು 'ಸನ್‌ಶೈನ್ ಸ್ಪೈಸ್' ಎಂದೂ ಕರೆಯಲಾಗುತ್ತದೆ. ಇದು ಮೆದುಳಿನಲ್ಲಿ ಸಿರೊಟೋನಿನ್ ಎಂಬ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಕೇಸರಿ ನೀರನ್ನು ಕುಡಿಯುವುದರಿಂದ ಆತಂಕ, ಮಾನಸಿಕ ಒತ್ತಡ ಕಡಿಮೆಯಾಗಿ ದಿನವಿಡೀ ಮೂಡ್ ಉತ್ಸಾಹದಿಂದ ಕೂಡಿರಲು ನೆರವಾಗುತ್ತದೆ.
Saffron Water Benefits

ಮುಟ್ಟಿನ ನೋವಿನಿಂದ ಮುಕ್ತಿ

ಮಹಿಳೆಯರಲ್ಲಿ ಕಾಡುವ ಮುಟ್ಟಿನ ಪೂರ್ವ ಲಕ್ಷಣಗಳು ಅಂದರೆ ಹೊಟ್ಟೆನೋವು, ಮೂಡ್ ಸ್ವಿಂಗ್ಸ್ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಕೇಸರಿ ನೀರು ರಾಮಬಾಣ. ಇದು ಹಾರ್ಮೋನ್‌ಗಳ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಮುಟ್ಟಿನ ದಿನಗಳಲ್ಲಿ ಉಂಟಾಗುವ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Saffron Water Benefits

ಜೀರ್ಣಕ್ರಿಯೆ ಮತ್ತು ಚಯಾಪಚಯ ಸುಧಾರಣೆ

ಕೇಸರಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ಇದು ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ತೂಕ ನಿಯಂತ್ರಣಕ್ಕೂ ಪರೋಕ್ಷವಾಗಿ ಸಹಾಯ ಮಾಡುತ್ತದೆ.
Saffron Water Benefits

ಉತ್ಕರ್ಷಣ ನಿರೋಧಕಗಳ ಗಣಿ

ಕೇಸರಿಯಲ್ಲಿ ಕ್ರೋಸಿನ್, ಕ್ರೋಸೆಟಿನ್, ಸ್ಯಾಫ್ರನಾಲ್ ಮತ್ತು ಕೆಂಪ್ಫೆರಾಲ್‌ನಂತಹ ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ಜೀವಕೋಶಗಳನ್ನು ಮುಕ್ತ ರಾಡಿಕಲ್‌ಗಳ ಹಾನಿಯಿಂದ ರಕ್ಷಿಸುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net