ಬೇಟೆಯನ್ನು ಬೆಂಬಿಡದೆ ದಾಳಿ ನಡೆಸುವ ಈ ಹಕ್ಕಿಯೂ ಹಾವುಗಳನ್ನು ಕಂಡರೆ ಸಾಕು ತನ್ನ ಉಗುರುಗಳಿಂದ ಅವುಗಳನ್ನು ಕುಕ್ಕಿ ಕೊಲ್ಲುತ್ತವೆ. ಅದರಲ್ಲೂ ಅತ್ಯಂತ ವಿಷಕಾರಿ ಹಾವುಗಳು ಅಟ್ಯಾಕ್ ಮಾಡಲು ಯತ್ನಿಸಿದರೆ, ಅವನ್ನು ಅತ್ಯಂತ ಕ್ರೂರವಾಗಿ ಕೊಂದು ತಿನ್ನುತ್ತದೆ.
‘ಸೆಕ್ರೆಟರಿ ಬರ್ಡ್’ ಒಂದು ವಿಶಿಷ್ಟ
ಮೇಲ್ನೋಟಕ್ಕೆ ಸುಂದರವಾಗಿರುವ ಈ ಹಕ್ಕಿಯನ್ನು ‘ಸೆಕ್ರೆಟರಿ ಬರ್ಡ್’ ಎಂದು ಕರೆಯಲಾಗುತ್ತದೆ. ಇತರೆ ಪ್ರಾಣಿಗಳಿಗಿಂತ ಹಾವುಗಳು ಇದರ ನೆಚ್ಚಿನ ಬೇಟೆಯಾಗಿದೆ. ವಾಸ್ತವವಾಗಿ, ಈ ಹಕ್ಕಿ ಅತ್ಯಂತ ವಿಷಕಾರಿ ಹಾವುಗಳನ್ನು ಕೊಂದು, ನಿಮಿಷಗಳೊಳಗೆ ತಿಂದು ಮುಗಿಸುತ್ತದೆ.
ಆಫ್ರಿಕಾದಲ್ಲಿ ಮೊದಲು ಕಂಡುಬಂದ ಹಕ್ಕಿ
ಈ ಹಕ್ಕಿ ತನ್ನ ಹೆಚ್ಚಿನ ಸಮಯವನ್ನು ನೆಲದ ಮೇಲೆ ಕಳೆಯುತ್ತದೆ. ನೋಡಲು ಆಕರ್ಷಕ ಮೈಬಣ್ಣ ಹೊಂದಿರುವ ಸೆಕ್ರೆಟರಿ ಬರ್ಡ್, ಸುಂದರವಾಗಿ ಕಂಡರೂ ಅತ್ಯಂತ ಅಪಾಯಕಾರಿ. ಅದಕ್ಕಾಗಿಯೇ ಇದನ್ನು ‘ದಿ ಆರ್ಚರ್ ಆಫ್ ಸ್ನೇಕ್ಸ್’ ಎಂದೂ ಆಂಗ್ಲ ಪದದಲ್ಲಿ ಕರೆಯುತ್ತಾರೆ.
ಐದು ಪಟ್ಟು ಬಲದಿಂದ ಒದೆಯುವ ಸಾಮರ್ಥ್ಯ
ಈ ಹಕ್ಕಿ ಹಾವುಗಳನ್ನು ಹಿಡಿಯಲು ತನ್ನ ತೀಕ್ಷ್ಣವಾದ, ಶಕ್ತಿಯುತ ಕಾಲುಗಳನ್ನು ಬಳಸುತ್ತದೆ. ತನ್ನ ದೇಹದ ತೂಕಕ್ಕಿಂತ ಐದು ಪಟ್ಟು ಬಲದಿಂದ ಒದೆಯುವ ಸಾಮರ್ಥ್ಯ ಹೊಂದಿದೆ. ಆ ಬಲ ಸುಮಾರು 195 ನ್ಯೂಟನ್‌ಗಳು ಎನ್ನಲಾಗಿದೆ.