ಬಿಸ್ಕತ್ತು ತಿನ್ನುವ ಅಭ್ಯಾಸವಿದೆಯೇ? ನಿಮ್ಮ ದೇಹದ ಮೇಲಾಗುವ ಪರಿಣಾಮ ನೋಡಿ!biscuits

ಅತಿಯಾದರೆ ಬಿಸ್ಕತ್​ ಕೂಡ ವಿಷ!
ಅತಿಯಾದರೆ ಬಿಸ್ಕತ್​ ಕೂಡ ವಿಷ!
Published on
biscuits

ಅತಿಯಾದರೆ ಬಿಸ್ಕತ್​ ಕೂಡ ವಿಷ!

ನಾವೆಲ್ಲರೂ ಸಂಜೆಯ ಚಹಾದೊಂದಿಗೆ ಒಂದು ಅಥವಾ ಎರಡು ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ, ಕೆಲವೊಬ್ಬರು ಒಂದೇ ಬಾರಿಗೆ ಒಂದು ಪ್ಯಾಕ್​ ಬಿಸ್ಕತ್​ಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ನೋಡಲು ಸಾಮಾನ್ಯವೆನಿಸಿದರೂ, ವೈದ್ಯಕೀಯ ಲೋಕದಲ್ಲಿ 'ರುಚಿಕರ ವಿಷ' ಎಂದು ಬಣ್ಣಿಸಿದ್ದಾರೆ.
biscuits

ಅಧಿಕ ತೂಕ ಮತ್ತು ಬೊಜ್ಜು

ಬಿಸ್ಕತ್ತುಗಳನ್ನು ಸಂಸ್ಕರಿಸಿದ ಮೈದಾ ಹಿಟ್ಟು ಮತ್ತು ಸಕ್ಕರೆಯಿಂದ ಕೂಡಿರುತ್ತದೆ. ಇದರಲ್ಲಿ ಯಾವುದೇ ನಾರಿನಾಂಶ ಇರುವುದಿಲ್ಲ. ಹಾಗಾಗಿ ನೀವೇನಾದರೂ ಪ್ರತಿದಿನ ಹಲವಾರು ಬಿಸ್ಕೇಟ್​ಗಳನ್ನು ತಿನ್ನುತ್ತಿದ್ದರೆ, ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣ ಹೆಚ್ಚಾಗುತ್ತದೆ.
biscuits

ರಕ್ತದಲ್ಲಿನ ಸಕ್ಕರೆಯ ಏರಿಕೆ

ಹೆಚ್ಚಿನ ಬಿಸ್ಕತ್ತುಗಳು ಸಿಹಿಯಾಗಿರುತ್ತವೆ ಮತ್ತು ಅವುಗಳಲ್ಲಿ 'ಹೈ ಫ್ರಕ್ಟೋಸ್ ಕಾರ್ನ್ ಸಿರಪ್' ಬಳಸಲಾಗುತ್ತದೆ. ಇದನ್ನು ಚಹಾದೊಂದಿಗೆ ಸೇರಿಸಿದಾಗ ಇನ್ನಷ್ಟು ಗ್ಲೂಕೋಸ್​ ಮಟ್ಟ ಹೆಚ್ಚಾಗುತ್ತದೆ.
biscuits

ಜೀರ್ಣಕ್ರಿಯೆಯ ಸಮಸ್ಯೆಗಳು

ಹೆಚ್ಚಿನ ಬಿಸ್ಕತ್ತುಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ಬಿಸ್ಕತ್ತುಗಳು ಕರುಳಿನ ಗೋಡೆಗಳಿಗೆ ಅಂಟಿಕೊಳ್ಳುತ್ತವೆ. ಇದರಲ್ಲಿ ನಾರಿನಂಶ ಶೂನ್ಯವಾಗಿರುವುದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.
biscuits

ಹೃದಯದ ಆರೋಗ್ಯಕ್ಕೆ ಅಪಾಯ

ಬಿಸ್ಕತ್ತುಗಳ ರುಚಿಯನ್ನು ಹೆಚ್ಚಿಸಲು ಮತ್ತು ಅವುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಅವುಗಳಲ್ಲಿ 'ಟ್ರಾನ್ಸ್ ಫ್ಯಾಟ್' (Trans Fats) ಅಥವಾ ಹೈಡ್ರೋಜಿನೇಟೆಡ್ ಎಣ್ಣೆಯನ್ನು ಬಳಸಲಾಗುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸಿ, ಹೃದಯದ ಧಮನಿಗಳಲ್ಲಿ ಅಡೆತಡೆ ಉಂಟು ಮಾಡುತ್ತದೆ.
biscuits

ಚರ್ಮದ ಸಮಸ್ಯೆ

ಬಿಸ್ಕತ್ತುಗಳಲ್ಲಿರುವ ಸಂಸ್ಕರಿಸಿದ ಸಕ್ಕರೆಯು ಚರ್ಮದ ಮೇಲಿನ ಕೊಲಾಜೆನ್ ಅನ್ನು ಹಾನಿಗೊಳಿಸುತ್ತದೆ. ಇದು ಮುಖದ ಮೇಲೆ ವಯಸ್ಸಾದ ರೀತಿಯಲ್ಲಿ ಸುಕ್ಕುಗಳನ್ನು ಮೂಡಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net