ಪ್ರತಿದಿನ ಬೆಳಗ್ಗೆ ಓಟ್ಸ್ ತಿನ್ನುವ ಅಭ್ಯಾಸವಿದ್ಯಾ

ಹಾಗಿದ್ರೆ, ತಪ್ಪದೇ ಈ ವಿಷಯಗಳನ್ನು ನೆನಪಿನಲ್ಲಿಡಿ!
ಹಾಗಿದ್ರೆ, ತಪ್ಪದೇ ಈ ವಿಷಯಗಳನ್ನು ನೆನಪಿನಲ್ಲಿಡಿ!
Published on
eating oats

ಹಾಗಿದ್ರೆ, ತಪ್ಪದೇ ಈ ವಿಷಯಗಳನ್ನು ನೆನಪಿನಲ್ಲಿಡಿ!

ಜಿಮ್​, ವ್ಯಾಯಾಮ ಮಾಡುವವರು ಪ್ರತಿದಿನ ತಿಂಡಿಯ ಭಾಗವಾಗಿ ಓಟ್ಸ್ ತಿನ್ನುತ್ತಾರೆ. ಇದು ದೇಹದ ತೂಕವನ್ನು ಸಮತೋಲನವಾಗಿರಿಸುತ್ತದೆ. ಬೆಳಗ್ಗಿನ ಉಪಹಾರಕ್ಕೆ ಓಟ್ಸ್ ತಿನ್ನುವುದರಿಂದ ನೆಗಟಿವ್​ ಪರಿಣಾಮಗಳಿವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.
eating oats

ಹಾಲು, ಹಣ್ಣುಗಳ ಮಿಶ್ರಣ

ಇದು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಪ್ರತಿದಿನ ಓಟ್ಸ್ ಮಾತ್ರ ತಿನ್ನುವ ಬದಲಿಗೆ ಇತರ ಆಹಾರಗಳನ್ನು ಸೇರಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ತಜ್ಞರು. ವಿಶೇಷವಾಗಿ, ಹಾಲು, ಹಣ್ಣುಗಳು ಮತ್ತು ಬೀಜಗಳೊಂದಿಗೆ ಮಿಕ್ಸ್​ ಮಾಡಿಕೊಂಡು ತಿಂದರೆ ಅದರ ರುಚಿಯೇ ಬೇರೆ
eating oats

ಈ ವಿಷಯ ನೆನಪಿರಲಿ

ಓಟ್ಸ್ ಗ್ಲುಟನ್ ಮುಕ್ತವಾಗಿದೆ. ಆದರೆ, ಅನೇಕ ಕಾರ್ಖಾನೆಗಳು ಅವುಗಳನ್ನು ಗೋಧಿ, ಬಾರ್ಲಿ ಅಂತಹ ಗ್ಲುಟನ್ ಹೊಂದಿರುವ ಧಾನ್ಯಗಳೊಂದಿಗೆ ಸಂಸ್ಕರಿಸುತ್ತವೆ. ನಿಮಗೆ ಸೆಲಿಯಾಕ್ ಕಾಯಿಲೆ ಅಥವಾ ಗ್ಲುಟನ್ ಅಲರ್ಜಿಯಿದ್ದರೆ, ಪ್ರಮಾಣೀಕೃತ ಗ್ಲುಟನ್-ಮುಕ್ತ ಓಟ್ಸ್ ಅನ್ನು ಮಾತ್ರ ಆಯ್ಕೆ ಮಾಡುವುದು ಒಳಿತು.
eating oats

ಗ್ಯಾಸ್​, ಉಬ್ಬುವಿಕೆ ಮತ್ತು ಹೊಟ್ಟೆ ಭಾರ

ನೀವು ಆಯ್ಕೆ ಮಾಡಿದ ಓಟ್ಸ್ ಉತ್ತಮವಾಗಿಲ್ಲದಿದ್ದರೆ, ಹೊಟ್ಟೆ ನೋವು, ಉಬ್ಬುವುದು ಅಥವಾ ಜೀರ್ಣಕಾರಿ ಸಮಸ್ಯೆಗಳು ಕಾಡಲಾರಂಭಿಸುತ್ತದೆ. ನಿಮ್ಮ ದೇಹವು ಫೈಬರ್‌ಗೆ ಒಗ್ಗಿಕೊಳ್ಳದಿದ್ದರೆ, ಹೆಚ್ಚು ಓಟ್ಸ್ ಸೇವನೆ ಗ್ಯಾಸ್​, ಉಬ್ಬುವುದು ಮತ್ತು ಹೊಟ್ಟೆ ಭಾರ ಎಂಬಂತೆ ಭಾಸವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net