ನೀವು ಅತಿಯಾಗಿ ಜಂಕ್​ ಫುಡ್ ತಿಂತಿರಾ? ಹಾಗಾದರೆ ನೀವಿದನ್ನು ತಿಳಿದುಕೊಳ್ಳಲೇಬೇಕು! Junk Food

ಜಂಕ್​ ಫುಡ್​ ತುಂಬಾ ಡೇಂಜರ್​!
ಜಂಕ್​ ಫುಡ್​ ತುಂಬಾ ಡೇಂಜರ್​!
Published on
Junk Food

ಜಂಕ್​ ಫುಡ್​ ತುಂಬಾ ಡೇಂಜರ್​!

ಇಂದು ಕುರುಕಲು ತಿಂಡಿ ಅಥವಾ ಜಂಕ್​ ಫುಡ್​ ಮತ್ತು ಫಾಸ್ಟ್​ ಫುಡ್​ ತಿನ್ನುವರ ಸಂಖ್ಯೆ ಅಧಿಕವಾಗುತ್ತಿದೆ. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
Junk Food

ಇಷ್ಟೆಲ್ಲ ತೊಂದರೆ ಇದೆ

ಬೊಜ್ಜು, ಹೃದಯ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಜೀರ್ಣಕಾರಿ ಸಮಸ್ಯೆ, ಯಕೃತ್ತಿನ ಸಮಸ್ಯೆ, ಮೆದುಳಿನ ಕಾರ್ಯ ಕಡಿಮೆ, ರೋಗನಿರೋಧಕ ಶಕ್ತಿ ದುರ್ಬಲ, ಚರ್ಮದ ಸಮಸ್ಯೆ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗಬಹುದು.
Junk Food

ಎಷ್ಟು ಅಪಾಯಕಾರಿ ಗೊತ್ತಾ?

ಆದ್ದರಿಂದ ಜಂಕ್​ ಫುಡ್​ ಮತ್ತು ಫಾಸ್ಟ್​ ಫುಡ್​ಗಳನ್ನು ಕಡಿಮೆ ಮಾಡಿ ಆರೋಗ್ಯಕರ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಜಂಕ್​ ಫುಡ್​ ಎಷ್ಟು ಅಪಾಯಕಾರಿ ಅನ್ನೋದನ್ನು ತಿಳಿಯೋಣ.
Junk Food

ತೂಕ ಹೆಚ್ಚಳ

ಜಂಕ್​ ಫುಡ್​ಗಳಲ್ಲಿ ಎಣ್ಣೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವುದರಿಂದ ಬೇಗನೇ ತೂಕ ಹೆಚ್ಚಾಗುತ್ತದೆ. ಇನ್ನೂ ತೂಕ ಹೆಚ್ಚಾಗುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
Junk Food

ಹೃದಯದ ಕಾಯಿಲೆ

ಜಂಕ್​ ಫುಡ್​ಗಳಲ್ಲಿ ಇರುವ ಅಧಿಕ ಕೊಲೆಸ್ಟ್ರಾಲ್ ಮತ್ತು ಟ್ರಾನ್ಸ್ ಕೊಬ್ಬುಗಳು ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ.
Junk Food

ಮಧುಮೇಹ

ಜಂಕ್​ ಫುಡ್​ಗಳಲ್ಲಿ ಅತಿಯಾದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿದಾಗ ಮಧುಮೇಹ ಉಂಟಾಗುತ್ತದೆ.
Junk Food

ಮಲಬದ್ಧತೆ

ಜಂಕ್​ ಫುಡ್​ಗಳಲ್ಲಿ ನಾರಿನ ಕೊರತೆ ಇರುವುದರಿಂದ ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.
Junk Food

ಏಕಾಗ್ರತೆ ಕೊರತೆ

ಕುರುಕಲು ತಿನಿಸುಗಳಲ್ಲಿ ಪೋಷಕಾಂಶಗಳ ಕೊರತೆ ಇದ್ದು, ಏಕಾಗ್ರತೆ ಮತ್ತು ಸ್ಮರಣಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.
Junk Food

ಅಧಿಕ ರಕ್ತದೊತ್ತಡ

ಜಂಕ್ ಫುಡ್‌ಗಳಲ್ಲಿ ಹೆಚ್ಚಿನ ಉಪ್ಪಿನ ಅಂಶವಿದ್ದು, ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
Junk Food

ದೇಹದ ರಕ್ಷಣೆ

ವಿಟಮಿನ್ ಮತ್ತು ಖನಿಜಗಳ ಕೊರತೆಯಿರುವ ಜಂಕ್​ ಫುಡ್​ ಸೇವಿಸುವುದರಿಂದ ದೇಹದ ರಕ್ಷಣೆ ಕಡಿಮೆಯಾಗುತ್ತದೆ.
Junk Food

ಯಕೃತ್ತಿನಲ್ಲಿ ಕೊಬ್ಬು

ಹೆಚ್ಚು ಎಣ್ಣೆಯುಕ್ತ ಮತ್ತು ಹುರಿದ ಆಹಾರವನ್ನು ಸೇವಿಸುವುದರಿಂದ ಯಕೃತ್ತಿನಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ.
Junk Food

ಮೊಡವೆಗಳು

ಜಂಕ್​ ಫುಡ್​ ಅನ್ನು ತಿನ್ನುವುದರಿಂದ ಮೊಡವೆಗಳು ಮತ್ತು ಚರ್ಮದಲ್ಲಿ ಹೆಚ್ಚುವರಿ ಎಣ್ಣೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
Junk Food

ಆಯಾಸ, ಆತಂಕ

ಹೆಚ್ಚು ಜಂಕ್ ಫುಡ್ ತಿನ್ನುವುದರಿಂದ ಆಯಾಸ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಉಂಟಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net