ಶ್ವಾಸಕೋಶಗಳು ಮನುಷ್ಯ ದೇಹದ ಅತ್ಯಂತ ಮುಖ್ಯ ಅಂಗಗಳಲ್ಲಿ ಒಂದು. ಇವುಗಳ ಮುಖ್ಯ ಕೆಲಸವೇ ಉಸಿರಾಟ ಮೂಲಕ ದೇಹಕ್ಕೆ ಆಮ್ಲಜನಕ ನೀಡುವುದು. ಹಾಗಾಗಿ ನೀವೇನಾದರೂ, ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈ ವ್ಯಾಯಮಗಳ ಅಭ್ಯಾಸ ಮಾಡಿ.
ನಡಿಗೆ
ಯಾವ ವ್ಯಕಲ್ತಿ ಶ್ವಾಸಕೋಶವನ್ನು ಆರೋಗ್ಯದಲ್ಲಿ ಇಡಬೇಕು ಎಂದು ಕೊಳ್ಳುತ್ತಾನೋ ಅವರು ಪ್ರತಿನಿತ್ಯ 20-30 ನಿಮಿಷಗಳ ಕಾಲ ವೇಗವಾಗಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಆಳವಾಗಿ ಉಸಿರಾಟವನ್ನು ಮಾಡಿ.
ಸರಳ ವ್ಯಾಯಮ
ಬಲ ಮೂಗಿನ ಹೊಳ್ಳೆಯನ್ನು ಬೆರಳಿನಿಂದ ಮುಚ್ಚಿ, ಎಡ ಮೂಗಿನಿಂದ ಉಸಿರು ತೆಗೆದುಕೊಳ್ಳಿ. ಹಾಗೆಯೇ ಬಲಭಾಗದ ಹೊಳ್ಳೆಯನ್ನು ಮುಚ್ಚಿ ಎಡಭಾಗದಲ್ಲಿ ಉಸಿರನ್ನು ಬಿಡಿ. ಹೀಗೆ ಪ್ರತಿದಿನ 10 ನಿಮಿಷ ಮಾಡಿ ನಿಮ್ಮ ಆರೋಗ್ಯವು ಸರಿಯಾಗಿರುತ್ತದೆ.
ಹೊಟ್ಟೆಯ ಉಸಿರಾಟ
ನೆಲದ ಮೇಲೆ ಮಲಗಿ ಅಥವಾ ನೇರವಾಗಿ ಕುಳಿತುಕೊಳ್ಳಿ. ಒಂದು ಕೈಯನ್ನು ಹೊಟ್ಟೆಯ ಮೇಲೆ, ಇನ್ನೊಂದನ್ನು ಎದೆಯ ಮೇಲಿಡಿ. ಮೂಗಿನ ಮೂಲಕ ದೀರ್ಘವಾದ ಉಸಿರಾಟವನ್ನು ಮಾಡಿ. ಈ ವೇಳೆ ನಿಮ್ಮ ಹೊಟ್ಟೆ ಉಬ್ಬಬೇಕು. ನಂತರ ಬಾಯಿಯ ಮೂಲಕ ಉಸಿರನ್ನು ನಿಧಾನವಾಗಿ ಬಿಡಿ.
ಭಸ್ತ್ರಿಕಾ ಪ್ರಾಣಾಯಾಮ
ಆಳವಾಗಿ ಮತ್ತು ವೇಗವಾಗಿ ಉಸಿರನ್ನು ಒಳಕ್ಕೆ ತಗೊಂಡು ಅಷ್ಟೇ ವೇಗವಾಗಿ ಹೊರಗೆ ಬಿಡಬೇಕು. ಈ ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ ಶ್ವಾಸಕೋಶಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಗುನುಗುವ ಉಸಿರಾಟ
ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಕಣ್ಣು ಮುಚ್ಚಿ ಸ್ವಲ್ಪ ಸಮಯ ನೇರವಾಗಿ ಕುಳಿತುಕೊಳ್ಳಿ. ನಂತರ ಕಿವಿಗಳನ್ನು ಬೆರಳುಗಳಿಂದ ಮುಚ್ಚಿ ಮೂಗಿನಿಂದ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಂತರ ಬಾಯಿಯನ್ನು ಮುಚ್ಚಿ ಓಂ ಎಂದು ಗುನುಗುತ್ತಾ ನಿಧಾನವಾಗಿ ಉಸಿರಾಟವಾಡಿ.