
ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸುವ ಸಂಭ್ರಮದಲ್ಲಿರುವ ಸಿಲಿಕಾನ್ ಸಿಟಿ ಜನರು, ಪೊಲೀಸರ ಷರತ್ತುಗಳ ಮೇರೆಗೆ ಹಾಕಲಾದ ತಾತ್ಕಾಲಿಕ ಪಟಾಕಿ ಮಳಿಗೆಯಲ್ಲಿ ಸುರುಸುರು ಬತ್ತಿ, ಫ್ಲವರ್ ಪಾಟ್, ಲಕ್ಷ್ಮಿ ಪಟಾಕಿ ಸೇರಿದಂತೆ ತರಹೇವಾರಿ ಪಟಾಕಿಗಳನ್ನು ಖರೀದಿ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ದೀಪಾವಳಿ ಹಬ್ಬದ ದಿನ ದೇವಿಯನ್ನು ಒಲಿಸಿಕೊಳ್ಳಲು ದೀಪದ ಹಣತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮಣ್ಣು ಹೆಚ್ಚು ಶ್ರೇಷ್ಠ. ಆ ಕಾರಣದಿಂದ ಹಣತೆಯು ದುಬಾರಿಯಾದರೂ ಸಹ ಅದರ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು.