ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಯಿಲೆಗಳು

ನಿರ್ಜಲೀಕರಣ (Dehydration)
ನಿರ್ಜಲೀಕರಣ (Dehydration)
Published on
ನಿರ್ಜಲೀಕರಣ (Dehydration)

ನಿರ್ಜಲೀಕರಣ (Dehydration)

ಬಿಸಿಲಿನಿಂದಾಗಿ ದೇಹದಲ್ಲಿನ ನೀರಿನಂಶ ಕಡಿಮೆಯಾಗುವುದನ್ನು ನಿರ್ಜಲೀಕರಣ ಎನ್ನುತ್ತಾರೆ. ಇದರಿಂದ ತಲೆಸುತ್ತು, ಆಯಾಸ ಮತ್ತು ಬಾಯಿ ಒಣಗುವಿಕೆ ಉಂಟಾಗುತ್ತದೆ.
ಸನ್ ಸ್ಟ್ರೋಕ್ (Heat Stroke)

ಸನ್ ಸ್ಟ್ರೋಕ್ (Heat Stroke)

ಹೆಚ್ಚು ಹೊತ್ತು ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ದೇಹದ ಉಷ್ಣತೆ ವಿಪರೀತವಾಗಿ ಹೆಚ್ಚಾಗುತ್ತದೆ. ಇದು ಪ್ರಾಣಾಪಾಯವನ್ನೂ ತಂದೊಡ್ಡಬಹುದು. ತಲೆನೋವು, ವಾಂತಿ ಮತ್ತು ಪ್ರಜ್ಞೆ ತಪ್ಪುವುದು ಇದರ ಲಕ್ಷಣಗಳು.
ಚರ್ಮದ ಸಮಸ್ಯೆಗಳು (Skin Problems)

ಚರ್ಮದ ಸಮಸ್ಯೆಗಳು (Skin Problems)

ಬೆವರಿನ ಗ್ರಂಥಿಗಳು ಮುಚ್ಚಿಹೋಗುವುದರಿಂದ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮ ಕೆಂಪಗಾಗುವುದು ಮತ್ತು ಉರಿಯುವುದು.
ಜೀರ್ಣಾಂಗವ್ಯೂಹದ ತೊಂದರೆಗಳು (Digestive Issues)

ಜೀರ್ಣಾಂಗವ್ಯೂಹದ ತೊಂದರೆಗಳು (Digestive Issues)

ಬೇಸಿಗೆಯಲ್ಲಿ ಆಹಾರ ಮತ್ತು ನೀರು ಬೇಗನೆ ಕಲುಷಿತಗೊಳ್ಳುವುದರಿಂದ ಅತಿಸಾರ (Diarrhea), ವಾಂತಿ, ಭೇದಿ ಕಾಣಿಸಿಕೊಳ್ಳುತ್ತದೆ.
ಕಣ್ಣಿನ ಸೋಂಕು (Eye Infections)

ಕಣ್ಣಿನ ಸೋಂಕು (Eye Infections)

ಬಿಸಿಲು ಮತ್ತು ಧೂಳಿನಿಂದಾಗಿ ಕಣ್ಣು ಕೆಂಪಾಗುವುದು ಅಥವಾ ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net