ಪ್ರತಿನಿತ್ಯ ಆಹಾರವನ್ನು ಸೇವಿಸಿದ ನಂತರ ಬಾಯಿಗೆ ಸ್ವಲ್ಪ ಜೀರಿಗೆ ಅಥವಾ ಮೆಂತ್ಯೆ ಕಾಳುಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಈ ಎರಡೂ ಪದಾರ್ಥಗಳು ಹೊಟ್ಟೆಯಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.
ಏಲಕ್ಕಿ
2 ಏಲಕ್ಕಿಯನ್ನು ಊಟ ಆದ ನಂತರ ಸೇವಿಸುವುದರಿಂದ ಇದು ಆಹಾರವನ್ನು ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಖನಿಜಗಳು ಬಾಯಿಯನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ.
ಕೊತ್ತಂಬರಿ ನೀರು
ಊಟದ ನಂತರ 2 ಅಥವಾ 3 ಪುದಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಲವಂಗ
ಲವಂಗವು ಯುಜೆನಾಲ್ ನಂಜುನಿರೋಧಕ ಗುಣಗನ್ನು ಹೊಂದಿದೆ. ಇದನ್ನು ಊಟ ಆದ ನಂತರ ನಿಮ್ಮ ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಇದು ನಿಮ್ಮ ಬಾಯಿಯಲ್ಲಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಪುದೀನ ಎಲೆಗಳು
ಊಟದ ನಂತರ 2 ಅಥವಾ 3 ಪುದಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News