ಸೋಯಾಬಿನ್ ಪೋಷಕಾಂಶಗಳ ಗನಿಯಾಗಿದ್ದು, ಪ್ರತಿದಿನ ಒಂದು ಕಪ್ ಬೇಯಿಸಿದ ಸೋಯಾಬಿನ್ ತಿನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮುಖ್ಯವಾಗಿ ದೂರವಾಗುವ 5 ಪ್ರಮುಖ ಆರೋಗ್ಯ ಸಮಸ್ಯೆಗಳು ಇಲ್ಲಿವೆ
ಹೃದಯಸಂಬಂಧಿ ಸಮಸ್ಯೆಗಳು ಮತ್ತು ಕೊಲೆಸ್ಟ್ರಾಲ್
ಸೋಯಾಬಿನ್‌ನಲ್ಲಿ ಪ್ರೋಟೀನ್, ನಾರಿನಂಶ ಮತ್ತು 'ಐಸೋಫ್ಲಾವೋನ್ಸ್' ಹೇರಳವಾಗಿವೆ. ಇವು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.
ಮೂಳೆಗಳ ದೌರ್ಬಲ್ಯ
ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ರಂಜಕದ ಪ್ರಮಾಣ ಹೆಚ್ಚಿರುತ್ತದೆ. ಇವು ಮೂಳೆಗಳನ್ನು ಗಟ್ಟಿಮುಟ್ಟಾಗಿಸಿ, ವಯಸ್ಸಾದಂತೆ ಬರುವ ಮೂಳೆ ಸವೆತ ಹಾಗೂ ಕೀಲು ನೋವಿನ ಸಮಸ್ಯೆಯನ್ನು ತಡೆಗಟ್ಟುತ್ತವೆ.
ರಕ್ತಹೀನತೆ
ಸೋಯಾಬಿನ್ ಕಬ್ಬಿಣದಂಶದ ಉತ್ತಮ ಆಕರವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿ, ಆಯಾಸ ಹಾಗೂ ರಕ್ತಹೀನತೆಯ ತೊಂದರೆ ನಿವಾರಣೆಯಾಗುತ್ತದೆ.
ಮಧುಮೇಹ
ಇದರಲ್ಲಿ 'ಗ್ಲೈಸೆಮಿಕ್ ಇಂಡೆಕ್ಸ್' ಕಡಿಮೆಯಿದ್ದು, ನಾರಿನಂಶ ಹೆಚ್ಚಿರುತ್ತದೆ. ಇದು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಏಕಾಏಕಿ ಹೆಚ್ಚಾಗದಂತೆ ನಿಯಂತ್ರಿಸಿ, ಮಧುಮೇಹವನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ.
ಜೀರ್ಣಕ್ರಿಯೆ ತೊಂದರೆ ಮತ್ತು ಮಲಬದ್ಧತೆ
ಸೋಯಾಬಿನ್‌ನಲ್ಲಿರುವ ಹೆಚ್ಚಿನ ನಾರಿನಂಶವು ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ. ಇದು ಹೊಟ್ಟೆಯುರಿತ, ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಸುಲಭವಾಗಿ ದೂರ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News