ಚರ್ಮದ ಆರೈಕೆಗೆ ಕಾಲಜನ್​ ಹೆಚ್ಚಿಸುವ ಆಹಾರಗಳು ! Skin care

ಚರ್ಮದ ಆರೈಕೆ
ಚರ್ಮದ ಆರೈಕೆ
Published on
Skin care

ಚರ್ಮದ ಆರೈಕೆ

ಚಳಿಗಾಲದಲ್ಲಿ ಗಾಳಿಯ ತೀವ್ರತೆಯಿಂದ ಚರ್ಮವು ಬಿರುಕು ಮೂಡುವುದು, ಘಾಸಿಯಾಗುತ್ತದೆ. ಹಾಗಾಗಿ ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ಇದು ಚರ್ಮವನ್ನು ಸುಧಾರಿಸುತ್ತದೆ.
Skin care

ಮೂಳೆ ಸೂಪ್

ಮೂಳೆಗಳನ್ನು ಬೇಯಿಸಿ ಮಾಡಿದ ಸೂಪ್ ನೇರವಾಗಿ ಕಾಲಜನ್ ಅಂಶವನ್ನು ಹೊಂದಿದ್ದು, ಚರ್ಮದ ಸ್ಥಿತಿಸ್ಥಾಪಕತ್ವ ಹೆಚ್ಚಿಸುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
Skin care

ಸಿಟ್ರಸ್ ಹಣ್ಣುಗಳು

ಕಿತ್ತಳೆ, ಮೂಸಂಬಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಕಾಲಜನ್ ಸಂಶ್ಲೇಷಣೆಗೆ ಉತ್ತಮವಾಗಿದೆ. ಹಾಗಾಗಿ ಈ ಹಣ್ಣುಗಳನ್ನು ಸೇವಿಸುವುದು ಸುಕ್ಕುಗಳು ಕಡಿಮೆಯಾಗಿ ಚರ್ಮ ಹೊಳಪು ಪಡೆಯುತ್ತದೆ.
Skin care

ಕೋಳಿ ಅಥವಾ ಮೀನು

ಪ್ರೋಟೀನ್ ಮತ್ತು ಅಮೈನೋ ಆಮ್ಲಗಳು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಹಾಗೆಯೇ ಮೀನಿನಲ್ಲಿ ಒಮೆಗಾ-3 ಇರುವುದರಿಂದ ಇದರ ಸೇವನೆಯು ಚರ್ಮಕ್ಕೆ ಒಳ್ಳೆಯದು.
Skin care

ಮೊಟ್ಟೆ

ಮೊಟ್ಟೆಯಲ್ಲಿ ಪ್ರೋಲೈನ್ ಅಮೈನೋ ಆಮ್ಲ ಸಮೃದ್ಧವಾಗಿದ್ದು, ಕಾಲಜನ್ ರಚನೆಗೆ ನೆರವಾಗುತ್ತದೆ.
Skin care

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಕಾಲಜನ್ ಹಾನಿಯನ್ನು ತಡೆಯುತ್ತವೆ. ಇದು ಚರ್ಮಕ್ಕೆ ತೇವಾಂಶವನ್ನು ನೀಡುವುದರ ಜೊತೆಗೆ ಆರೈಕೆ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net