ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಸಂಸ್ಥೆಗೆ ಸಖತ್ ಪೈಪೋಟಿ ಕೊಡಲು ಸನ್ನದ್ಧವಾಗಿರುವ ಚೀನಾ, ಇದೀಗ ತಮ್ಮದೇ ಎಕ್ಸ್ಪೆಂಗ್ ಸಂಸ್ಥೆಯಿಂದ ತಯಾರಾದ ಹಾರುವ ಕಾರುಗಳ ಟ್ರಯಲ್ ಅನ್ನು ಯಶಸ್ವಿಯಾಗಿ ನಡೆಸಿದೆ.
ಅಮೆರಿಕದ ದೈತ್ಯ ಟೆಸ್ಲಾವನ್ನು ಹಿಂದಿಕ್ಕಿದ ಚೀನೀ ಕಂಪನಿ
ಟೆಸ್ಲಾಗೂ ಮುನ್ನವೇ ಅಖಾಡಕ್ಕಿಳಿದಿರುವುದು ಸದ್ಯ ಅಮೆರಿಕನ್ನರ ಹುಬ್ಬೇರಿಸಿದೆ. ಈ ವಾರ, ಚೀನಾ ಕಂಪನಿಯು ಹಾರುವ ಕಾರುಗಳ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಈ ಕಾರುಗಳನ್ನು ಹೊಸ ಪೀಳಿಗೆಯ ಸಾರಿಗೆಯಾಗಿ ಪ್ರಚಾರ ಮಾಡಲಾಗುತ್ತಿದೆ.
ಉತ್ಪಾದನೆ ಆರಂಭ
ಚೀನಾದ ಮಾಧ್ಯಮ ವರದಿಗಳ ಪ್ರಕಾರ, ಸುಮಾರು 120,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ಘಟಕವು ಭೂ ವಿಮಾನ ವಾಹಕ ಎಂದು ಕರೆಯಲ್ಪಡುವ ತನ್ನ ಮಾಡ್ಯುಲರ್ ಹಾರುವ ಕಾರಿನ ಮೊದಲ ಹಂತವನ್ನು ಈಗಾಗಲೇ ಪೂರ್ಣಗೊಳಿಸಿದೆ
ಆರಂಭಿಕ ಸಾಮರ್ಥ್ಯ 5,000 ಘಟಕಗಳು
ಈ ಸ್ಥಾವರವು ವಾರ್ಷಿಕವಾಗಿ 10,000 ಹಾರುವ ಕಾರು ಮಾಡ್ಯೂಲ್‌ಗಳನ್ನು ಉತ್ಪಾದಿಸಲು ಯೋಜಿಸಿದೆ. ಇದರ ಆರಂಭಿಕ ಸಾಮರ್ಥ್ಯ 5,000 ಘಟಕಗಳು ಎನ್ನಲಾಗಿದೆ.