ಮಧುಮೇಹವನ್ನು ನಿಯಂತ್ರಿಸುವ 5 ಸೂಪರ್ ಫುಡ್​​ಗಳು ಇವೇ ನೋಡಿ!

ಮಧುಮೇಹವನ್ನು ನಿಯಂತ್ರಿಸುವ 5 ಸೂಪರ್ ಫುಡ್​​ಗಳು ಇವೇ ನೋಡಿ!
ಮಧುಮೇಹವನ್ನು ನಿಯಂತ್ರಿಸುವ 5 ಸೂಪರ್ ಫುಡ್​​ಗಳು ಇವೇ ನೋಡಿ!
Published on
Check out these 5 superfoods that control diabetes

ಮಧುಮೇಹವನ್ನು ನಿಯಂತ್ರಿಸುವ 5 ಸೂಪರ್ ಫುಡ್​​ಗಳು ಇವೇ ನೋಡಿ!

ಮಧುಮೇಹ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಸರಿಯಾದ ಆಹಾರ ಪದ್ಧತಿಯಿಂದ ಇದನ್ನು ಸುಲಭವಾಗಿ ಹತೋಟಿಯಲ್ಲಿಡಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಸಮತೋಲನದಲ್ಲಿಡಲು ಈ ಕೆಳಗಿನ ಆಹಾರಗಳು ರಾಮಬಾಣ.
Check out these 5 superfoods that control diabetes

ಹಸಿರು ಎಲೆಯ ತರಕಾರಿಗಳು

ಹಸಿರು ಎಲೆಯ ತರಕಾರಿಗಳು (ಉದಾಹರಣೆಗೆ ಪಾಲಕ್) ಮಧುಮೇಹಿಗಳಿಗೆ ವರದಾನ. ಇವುಗಳಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳು ಬಹಳ ಕಡಿಮೆ ಇರುತ್ತವೆ. ಆದರೆ ವಿಟಮಿನ್ ಸಿ ಮತ್ತು ಫೈಬರ್ ಹೇರಳವಾಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿಢೀರ್ ಏರಿಕೆಯಾಗದಂತೆ ತಡೆಯುತ್ತವೆ.
Check out these 5 superfoods that control diabetes

ಹೆಸರುಕಾಳು ಮತ್ತು ಬೀನ್ಸ್

ಬೀನ್ಸ್ ಮತ್ತು ಹೆಸರುಕಾಳುಗಳಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತವೆ, ಇದರಿಂದಾಗಿ ಪದೇ ಪದೇ ಹಸಿವಾಗುವುದು ಕಡಿಮೆಯಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಾಗಿ, ಸಕ್ಕರೆ ನಿಧಾನವಾಗಿ ರಕ್ತಕ್ಕೆ ಸೇರುತ್ತದೆ.
Check out these 5 superfoods that control diabetes

ಬಾದಾಮಿ ಮತ್ತು ಡ್ರೈ ಫ್ರೂಟ್ಸ್​​

ಡ್ರೈ ಫ್ರೂಟ್ಸ್, ಅದರಲ್ಲೂ ವಿಶೇಷವಾಗಿ ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು ಮತ್ತು ಮ್ಯಾಗ್ನೀಷಿಯಂ ಇರುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಮುಷ್ಟಿ ಬಾದಾಮಿ ತಿನ್ನುವುದು ಹೃದಯದ ಆರೋಗ್ಯಕ್ಕೂ ಉತ್ತಮ.
Check out these 5 superfoods that control diabetes

ಹಾಗಲಕಾಯಿ

ಹಾಗಲಕಾಯಿಯಲ್ಲಿ 'ಚರಂಟಿನ್' ಮತ್ತು 'ಮೊಮೊರ್ಡಿಸಿನ್' ಎಂಬ ಅಂಶಗಳಿದ್ದು, ಇವು ರಕ್ತದ ಸಕ್ಕರೆಯನ್ನು ನೇರವಾಗಿ ಕಡಿಮೆ ಮಾಡುವ ಶಕ್ತಿ ಹೊಂದಿವೆ. ವಾರಕ್ಕೆ ಎರಡು ಬಾರಿಯಾದರೂ ಹಾಗಲಕಾಯಿ ಜ್ಯೂಸ್ ಅಥವಾ ಪಲ್ಯ ಸೇವಿಸುವುದು ಇನ್ಸುಲಿನ್ ಉತ್ಪತ್ತಿಗೆ ಸಹಕಾರಿ.
Check out these 5 superfoods that control diabetes

ಬೆರ್ರಿ ಹಣ್ಣುಗಳು

ಸೇಬು ಅಥವಾ ಬಾಳೆಹಣ್ಣಿಗಿಂತ ಸ್ಟ್ರಾಬೆರಿ, ಬ್ಲೂಬೆರಿ ಅಥವಾ ನಮ್ಮದೇ ನಾಟಿ ನೇರಳೆ ಹಣ್ಣುಗಳು ಮಧುಮೇಹಿಗಳಿಗೆ ಬೆಸ್ಟ್. ಇವುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೆಚ್ಚಿರುತ್ತವೆ ಮತ್ತು ಇವು ಸಕ್ಕರೆ ಅಂಶವನ್ನು ತಕ್ಷಣವೇ ಏರಿಸುವುದಿಲ್ಲ. ಸಿಹಿ ತಿನ್ನಬೇಕು ಅನ್ನಿಸಿದಾಗ ಇವು ಉತ್ತಮ ಆಯ್ಕೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net