ಅಗ್ಗದ ದರ, ಅಸಾಧಾರಣ ಬಲ...ಪ್ರೋಟೀನ್ ಪೌಡರ್‌ಗಿಂತಲೂ ಪವರ್‌ಫುಲ್ ಈ ಕಡಲೆ ಹಿಟ್ಟು!

ಉತ್ತಮ ಜೀರ್ಣಕ್ರಿಯೆ
ಉತ್ತಮ ಜೀರ್ಣಕ್ರಿಯೆ
Published on
Cheap price, extraordinary strength...this flour is more powerful than protein powder

ಉತ್ತಮ ಜೀರ್ಣಕ್ರಿಯೆ

ಸತ್ತುವಿನಲ್ಲಿ ನಾರಿನಂಶ (Fiber) ಹೇರಳವಾಗಿದೆ. ಇದು ಮಲಬದ್ಧತೆಯನ್ನು ನಿವಾರಿಸಿ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸತ್ತು ಪಾನೀಯ ಕುಡಿಯುವುದರಿಂದ ಹೊಟ್ಟೆಯು ತಂಪಾಗಿರುತ್ತದೆ.
Cheap price, extraordinary strength...this flour is more powerful than protein powder

ತಕ್ಷಣದ ಶಕ್ತಿ ನೀಡುತ್ತದೆ

ಇದು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಸಮತೋಲನವನ್ನು ಹೊಂದಿದೆ. ದಣಿದ ಸಮಯದಲ್ಲಿ ಅಥವಾ ವ್ಯಾಯಾಮದ ನಂತರ ಇದನ್ನು ಸೇವಿಸಿದರೆ, ದೇಹಕ್ಕೆ ತಕ್ಷಣದ ಶಕ್ತಿ ಲಭಿಸುತ್ತದೆ.
Cheap price, extraordinary strength...this flour is more powerful than protein powder

ತೂಕ ಇಳಿಕೆಗೆ ಸಹಕಾರಿ

ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ ಮತ್ತು ಪ್ರೋಟೀನ್ ಹೆಚ್ಚಿದೆ. ಇದನ್ನು ಸೇವಿಸಿದ ನಂತರ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ, ಇದರಿಂದ ಅತಿಯಾಗಿ ತಿನ್ನುವುದು ತಪ್ಪುತ್ತದೆ ಮತ್ತು ತೂಕ ಇಳಿಸಲು ಸುಲಭವಾಗುತ್ತದೆ.
Cheap price, extraordinary strength...this flour is more powerful than protein powder

ಮಧುಮೇಹಿಗಳಿಗೆ ಬೆಸ್ಟ್​​

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸತ್ತು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಸ್ಥಿರವಾಗಿಡಲು ನೆರವಾಗುವುದರಿಂದ ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರವಾಗಿದೆ.
Cheap price, extraordinary strength...this flour is more powerful than protein powder

ಚರ್ಮದ ಆರೋಗ್ಯ

ಇದರಲ್ಲಿರುವ ಕಬ್ಬಿಣದ ಅಂಶ ಮತ್ತು ಮ್ಯಾಂಗನೀಸ್ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net