'418'ನಲ್ಲಿ​ ಚೈತ್ರಾ ಭಯಾನಕ ಅವತಾರ

'418'ನಲ್ಲಿ​ ಚೈತ್ರಾ ಭಯಾನಕ ಅವತಾರ
Published on: 

ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ 418 ಸಿನಿಮಾದ ಟ್ರೈಲರ್ ರಿಲೀಸ್​ ಆಗಿದೆ. ಇದರಲ್ಲಿ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಿಸಿದೆ.

ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್ ನಿರ್ದೇಶಿಸಿದ ಈ ಸಿನಿಮಾಕ್ಕೆ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಹಾಗೂ ಶಶಾಂಕ್ ಪಾಟೀಲ್ ಕೂಡ ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ದೆವ್ವ ಆಗಿ ಚೈತ್ರಾ ನಟನೆ

418 ಸಿನಿಮಾದಲ್ಲಿ ದೆವ್ವ ಆಗಿ ನಟಿಸಿದ್ದಾರೆ. ಸುಖ ದಾಂಪತ್ಯ ನಡೆಸುತ್ತಿದ್ದ ದಂಪತಿ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆ ಸಾವು. ಸೇಡು ತೀರಿಸಿಕೊಳ್ಳುವ ಜಿದ್ದಿಗೆ ಬೀಳುವಂತೆ ಮಾಡುತ್ತದೆ. ಡಿ ಗ್ಲಾಮ್​ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ಚೈತ್ರಾ ಈ ಸಿನಿಮಾದಲ್ಲಿ ಬೇರೆಯದ್ದೇ ಆಕ್ಟಿಂಗ್​ ಶೈಲಿಯನ್ನು ಮುಂದಿಟ್ಟಿದ್ದಾರೆ.

ರಿಲೀಸ್ ಯಾವಾಗ

ಚೈತ್ರಾ ಜೆ ಆಚಾರ್ ನಟನೆಯ 418 ಸಿನಿಮಾವು ಇದೇ 23ರಂದು ತೆರೆಗೆ ಬರಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ.

ಸಿನಿಮಾ ಕತೆ ಏನು?

418 ಎನ್ನುವುದು ಮನೆಯ ಸಂಖ್ಯೆ. ಆ ಮನೆಯೊಳಗೆ ಅಕ್ಕಿಯೂಕಾಲಿಡೋದಿಲ್ಲ ಅಂತಹ ಮನೆಗೆ ವಿದ್ಯಾರ್ಥಿಗಳ ತಂಡವೊಂದು ಭೇಟಿ ನೀಡುತ್ತದೆ. ಈ ವೇಳೆ ಅಲ್ಲಿ ದೇವಿಕಾ ಪಾತ್ರ ಕಾಣಿಸಿಕೊಳ್ಳುತ್ತದೆ. ಆನಂತರ ಆಗುವ ಬದಲಾವಣೆಗಳೇ ಸಿನಿಮಾಕ್ಕೆ ತಿರುವು ನೀಡುವುದು. ಸುಖವಾಗಿರುವ ದಾಂಪತ್ಯದಲ್ಲಿ ಪತಿಯ ಸಾವು, ಅನಿರೀಕ್ಷಿತ ಕೊಲೆಗಳು ಈ ದ್ವೇಷದ ಜಿದ್ದಿಗೆ ಕಾರಣನ ಎನ್ನುವುದು ಈ ಸಿನಿಮಾ ನೋಡಿದ ಮೇಲೆ ತಿಳಿಯುತ್ತದೆ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾದಂತೆ ಭಾಸವಾಗುತ್ತದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net