ದೀರ್ಘಾವಧಿಯ ಜೀವನಕ್ಕಾಗಿ ಈ ಅಭ್ಯಾಸಗಳನ್ನು ಅನುಸರಿಸಿ...| Health tips

ಸುಗಮ ಜೀವನಕ್ಕೆ ಈ ಅಭ್ಯಾಸಗಳು
ಸುಗಮ ಜೀವನಕ್ಕೆ ಈ ಅಭ್ಯಾಸಗಳು
Published on
Health tips

ಸುಗಮ ಜೀವನಕ್ಕೆ ಈ ಅಭ್ಯಾಸಗಳು

ಇತ್ತೀಚಿನ ದಿನಗಳಲ್ಲಿ ಹದಿಹರೆಯರಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಹಾಗಾಗೀ ಈ ರೀತಿಯ ಒಳ್ಳೆಯ ಅಭ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಈ ಸಮಸ್ಯೆಗಳಿಂದ ದೂರ ಇರಬಹುದು.
Health tips

ಸಮತೋಲಿತ ಆಹಾರ ಸೇವನೆ

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಒಮೆಗಾ-3 ಕೊಬ್ಬಿನಾಮ್ಲಗಳಿರುವ ಮೀನುಗಳನ್ನು ಆಹಾರದಲ್ಲಿ ಬಳಸುವುದರಿಂದ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
Health tips

ದೈಹಿಕ ಚಟುವಟಿಕೆ

ವಾರಕ್ಕೆ ಕನಿಷ್ಠ 150 ನಿಮಿಷಗಳ ಏರೋಬಿಕ್​ ಚಟುವಟಿಕೆಗಳನ್ನು ಮಾಡುವುದು. ಉದಾಹರಣೆಗೆ ತ್ವರಿತ ನಡಿಗೆ, ಈಜುವುದು, ಸೈಕ್ಲಿಂಗ್​ ವ್ಯಾಯಾಮವನ್ನು ಮಾಡುವುದರಿಂದ ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಚಲನೆಯನ್ನು ಸುಧಾರಿಸುತ್ತದೆ.
Health tips

ನಿದ್ರೆ

ನಮ್ಮಲ್ಲಿರುವ ಒತ್ತಡವು ಹೃದಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರಿಂದ ಧ್ಯಾನ, ಯೋಗ, ಆಳವಾದ ಉಸಿರಾಟ ಮಾಡುವ ತಂತ್ರಗಳನ್ನು ಮಾಡುವುದರಿಂದ ಹೃದಯೀ ಸಂಬಂಧಿ ಕಾಯಿಲೆಗಳಿಂದ ಹಿಂದೆ ಸರಿಯಬಹುದು.
Health tips

ಕುಟುಂಬದೊಂದಿಗೆ ಸಮಯ

ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ, ಸಮುದಾಯದಲ್ಲಿ ತೊಡಗಿಸಿಕೊಳ್ಳಿ ಇದು ನಿಮಗೆ ಒಳ್ಳೆಯ ವಾತಾವರಣವನ್ನು ನೀಡುವುದರ ಜೊತೆಗೆ ಸಾಮಾಜಿಕವಾಗಿ ಬಂಧನಗಳನ್ನು ತೊಡಗಿಸುತ್ತದೆ.
Health tips

ಉದ್ದೇಶಪೂರ್ವಕ ಜೀವನ

ನಿಮ್ಮ ಜೀವನಕ್ಕೆ ಒಂದು ಉದ್ದೇಶವನ್ನು ಕಂಡುಕೊಳ್ಳಿ. ಇದು ಕೆಲಸ, ಹವ್ಯಾಸ, ಸೇವೆ ಅಥವಾ ಕುಟುಂಬವಾಗಿರಬಹುದು. ಉದ್ದೇಶವಿರುವ ಜನರು ಸರಾಸರಿ 7 ವರ್ಷ ಹೆಚ್ಚು ಬದುಕುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net