ಕ್ಯಾಲ್ಸಿಯಂ ಕೊರತೆಯೇ? ಮೂಳೆಗಳ ಸವಕಳಿ ತಡೆಯಲು ಈ ಆಹಾರಗಳೇ ರಾಮಬಾಣ! Bone Health

ಮೂಳೆಗಳ ಆರೋಗ್ಯ
ಮೂಳೆಗಳ ಆರೋಗ್ಯ
Published on
Bone Health

ಮೂಳೆಗಳ ಆರೋಗ್ಯ

ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಅವುಗಳ ಬಲವನ್ನು ಹೆಚ್ಚಿಸಲು ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಅತ್ಯಂತ ಅವಶ್ಯಕ. ವಯಸ್ಸಾದಂತೆ ಕಾಡುವ ಮೂಳೆ ಸವಕಳಿ ಮತ್ತು ಕೀಲು ನೋವಿನ ಸಮಸ್ಯೆಯನ್ನು ತಡೆಯಲು ಈ ಆಹಾರ ಸೇವಿಸಿ.
Bone Health

ಡೈರಿ ಉತ್ಪನ್ನಗಳು

ಕ್ಯಾಲ್ಸಿಯಂನ ಅತ್ಯುತ್ತಮ ಮೂಲವೆಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳು. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಅಥವಾ ಒಂದು ಕಪ್ ಮೊಸರು ಸೇವಿಸುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚಾಗುತ್ತದೆ.
Bone Health

ಹಸಿರು ಎಲೆ ತರಕಾರಿಗಳು

ಪಾಲಕ್ ಸೊಪ್ಪು, ಮೆಂತೆ ಸೊಪ್ಪು ಮತ್ತು ಬ್ರೊಕೋಲಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಇದಲ್ಲದೆ, ಇವುಗಳಲ್ಲಿ ವಿಟಮಿನ್ ಕೆ ಇದ್ದು, ಇದು ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
Bone Health

ಒಣ ಹಣ್ಣುಗಳು ಮತ್ತು ಬೀಜಗಳು

ಬಾದಾಮಿಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲದೆ ಮೆಗ್ನೀಸಿಯಂ ಮತ್ತು ಫಾಸ್ಫರಸ್ ಕೂಡ ಇರುತ್ತದೆ. ಅಕ್ರೋಟ್‌ನಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಮೂಳೆಗಳ ಸವಕಳಿಯನ್ನು ತಡೆಯುತ್ತವೆ.
Bone Health

ಮೊಟ್ಟೆ ಮತ್ತು ಮೀನು

ವಿಟಮಿನ್ ಡಿ ಇಲ್ಲದೆ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಮೊಟ್ಟೆಯ ಹಳದಿ ಲೋಟೆಯಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಹಾಗೆಯೇ ಸಾಲ್ಮನ್ ಮತ್ತು ಬಂಗುಡೆಯಂತಹ ಮೀನುಗಳಲ್ಲಿ ವಿಟಮಿನ್ ಡಿ ಹಾಗೂ ಒಮೆಗಾ-3 ಇರುವುದರಿಂದ ಇವು ಮೂಳೆಗಳ ಸಾಂದ್ರತೆಯನ್ನು ಉತ್ತಮವಾಗಿರಿಸುತ್ತವೆ.
Bone Health

ರಾಗಿ

ದಕ್ಷಿಣ ಭಾರತದ ಪ್ರಮುಖ ಆಹಾರವಾದ ರಾಗಿಯಲ್ಲಿ ಕ್ಯಾಲ್ಸಿಯಂ ಅಂಶ ಸಸ್ಯಹಾರಿಗಳ ಪಾಲಿಗೆ ವರದಾನವಾಗಿದೆ. ಅಕ್ಕಿ ಅಥವಾ ಗೋಧಿಗಿಂತ ರಾಗಿಯಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ. ರಾಗಿ ಮುದ್ದೆ ಅಥವಾ ರಾಗಿ ಅಂಬಲಿಯನ್ನು ಸೇವಿಸುವುದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net