ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ, ಅನೇಕ ಕಾಯಿಲೆಗೆ ತುತ್ತಾಗ ಬೇಕಾಗುತ್ತದೆ. ಹಾಗಾಗಿ ಈ ವಸ್ತುಗಳ
ಉಣ್ಣೆಯ ಸ್ವೆಟರ್
ಚಳಿಗಾಲದಲ್ಲಿ ಚಿಕ್ಕವರಿನಿಂದ ಹಿರಿಯರವರೆಗೂ ದೇಹವನ್ನು ಬೆಚ್ಚಗಿಡುವುದು ಒಂದು ಉತ್ತಮ ಮಾರ್ಗವಾಗಿದೆ. ಹಾಗಾಗಿ ನೀವು ಉಣ್ಣೆಯ ಸ್ವೆಟರ್ಗಳನ್ನು ಬಳಸಿ. ಇದು ಚಳಿಯನ್ನು ಒಳಗೆ ಬರದಂತೆ ತಡೆದು ದೇಹವನ್ನು ಬೆಚ್ಚಗಿರಿಸುತ್ತದೆ.
ಪಫರ್ ಕೋಟ್
ವಿಂಟರ್ ಜಾಕೆಟ್ ಇದು ಹೊರಗೆ ಮುಖ್ಯ ಪದರವನ್ನು ಹೊಂದಿರುತ್ತದೆ. ಹಾಗಾಗಿ ವಾಟರ್‌ಪ್ರೂಫ್ ಇರುವಂತಹ ಜಾಕೆಟ್ನ್ನು ಖರಿದೀಸಿ. ಇದನ್ನು ನೀವು ಗಾಡಿಯಲ್ಲಿ ಹೋಗುವಾಗ ಬಳಸುವುದರಿಂದ ಬೀಸುವ ಚಳಿಯನ್ನು ದೇಹಕ್ಕೆ ತಾಗದಂತೆ ತಡೆಯಬಹುದು.
ಸ್ಕಾರ್ಫ್ ಅಥವಾ ಮಫ್ಲರ್
ಚಳಿಗಾಲದಲ್ಲಿ ಕುತ್ತಿಗೆ ಮತ್ತು ಮುಖವನ್ನು ಚಳಿ ಮತ್ತು ಗಾಳಿಯಿಂದ ರಕ್ಷಿಸಿಕೊಳ್ಳಲು ಸ್ಕಾರ್ಫ್ ಅಥವಾ ಮಫ್ಲರನ್ನು ಬಳಸಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಗ್ಲೌಸ್ ಅಥವಾ ಹ್ಯಾಂಡ್ ಗ್ಲೌಸ್
ಕೈಗಳನ್ನು ಬೆಚ್ಚಗಿರಿಸಿ, ಫ್ರಾಸ್ಟ್‌ಬೈಟ್ ತಡೆಯುತ್ತದೆ. ಟಚ್‌ಸ್ಕ್ರೀನ್ ಸಾಮರ್ಥ್ಯವಿರುವಂತಹದನ್ನು ಖರೀದಿಸಿ.
ಟೋಪಿ
ಉಣ್ಣೆ ಟೋಪಿಯನ್ನು ಧರಿಸುವುದರಿಂದ ಇದು ತಲೆಯನ್ನು ಹೆಚ್ಚು ಶಾಖದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಟೋಪಿಯನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ.
ಶೂಗಳು
ಶೂಗಳನ್ನು ಚಳಿಗಾಲದಲ್ಲಿ ಧರಿಸುವುದರಿಂದ ಇದು ಕಾಲುಗಳನ್ನು ಒದ್ದೆ ಮತ್ತು ಚಳಿಯಿಂದ ರಕ್ಷಿಸುತ್ತದೆ. ಹಾಗಾಗಿ ಆದಷ್ಟು ಬೂಟುಗಳನ್ನು ಬಳಸಿರಿ.