ಕೆಲವು ಆಯುರ್ವೇದ ಆಹಾರಗಳಾದ ಆಮ್ಲಾ, ಅಶ್ವಗಂಧ, ಅರಿಶಿಣ, ತುಳಸಿ ಮತ್ತು ಗಿಲೋಯ್ನಂತಹ ಆಹಾರಗಳನ್ನು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯಕವಾಗಬಹುದು. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ.
ಆಹಾರ
ಆಯುರ್ವೇದವು ನಿಮ್ಮ ದೋಷಕ್ಕೆ ಅನುಗುಣವಾಗಿ ತಿನ್ನಲು ಮತ್ತು ಚಿಕಿತ್ಸೆಯನ್ನು ಹೆಚ್ಚಿಸಲು ಸೂಚಿಸುತ್ತದೆ. ತಾಜಾ ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ. ಹಾಗೆಯೇ ನೀರು ಮತ್ತು ಗಿಡಮೂಲಿಕೆ ಪಾನೀಯಗಳೊಂದಿಗೆ ದೇಹವನ್ನು ಹೈಡ್ರೇಟ್ ಮಾಡಿ. ಇದು ಸ್ತನ ಕ್ಯಾನ್ಸರ್ನ್ನು ತಡೆಯಲು ಸಹಾಯ ಮಾಡುತ್ತದೆ.
ಜೀವನಶೈಲಿ
ದೇಹದ ಸಮಗ್ರ ಆರೈಕೆಗಾಗಿ ವ್ಯಾಯಾಮ, ಯೋಗ ಮತ್ತು ಧ್ಯಾನವನ್ನು ಮಾಡಿ. ಇದು ಕ್ಯಾನ್ಸರ್ ಅಪಾಯವಾಗಿರುವ ಬೊಜ್ಜುತನವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗೆಯೇ ಧೂಮಪಾನ, ಮದ್ಯಪಾನವನ್ನು ಸೇವಿಸುವುದನ್ನು ಬಿಡಿ ಇವುಗಳ ಅಭ್ಯಾಸವು ಕ್ಯಾನ್ಸರ್ ಬರಲು ಕಾರಣವಾಗುತ್ತದೆ.
ವೈದ್ಯಕೀಯ
ಯಾರಿಗಾದರು ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದರೆ ಅವರು ನಿಯಮಿತ ತಪಾಸಣೆಗಾಗಿ ವೈದ್ಯರ ಬಳಿ ಹೋಗುವುದು ಉತ್ತಮ. ಮೊದಲು ಮುನ್ನಚ್ಚರಿಕೆಗಾಗಿ ನಿಮ್ಮ ಕುಟುಂಬದಲ್ಲಿ ಯಾರಾದರು ಈ ಸಮಸ್ಯೆಯಿಂದ ಬಳಲುತ್ತಿದ್ದಾರಾ ಎಂದು ತಿಳಿಯಿರಿ. ಇದಾದ ಬಳಿಕ ವೈದ್ಯರನ್ನು ಭೇಟಿ ಮಾಡಿ ಸುರಕ್ಷಿತವಾಗಿರಲು ಚಿಕಿತ್ಸೆ ಪಡೆಯಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News