ಪೋಷಕಾಂಶಗಳ ಪವರ್‌ಹೌಸ್ ಬ್ಲ್ಯಾಕ್ ಬೀನ್ಸ್..ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಸರಳ ಸೂತ್ರ | Black Beans

ಬ್ಲ್ಯಾಕ್ ಬೀನ್ಸ್
ಬ್ಲ್ಯಾಕ್ ಬೀನ್ಸ್
Published on
Black Beans A Powerhouse of Nutrients

ಬ್ಲ್ಯಾಕ್ ಬೀನ್ಸ್

ಬ್ಲ್ಯಾಕ್ ಬೀನ್ಸ್ ಕೇವಲ ರುಚಿಕರವಾದ ಆಹಾರವಷ್ಟೇ ಅಲ್ಲ, ಇದು ಪೋಷಕಾಂಶಗಳ ಗಣಿಯಾಗಿವೆ. ಪ್ರೋಟೀನ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ.
Black Beans A Powerhouse of Nutrients

ಡಯಾಬಿಟಿಸ್​

ಬ್ಲ್ಯಾಕ್ ಬೀನ್ಸ್​​ನಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಇರುವುದರಿಂದ, ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವು ದಿಢೀರ್ ಏರಿಕೆಯಾಗುವುದಿಲ್ಲ. ಮಧುಮೇಹಿಗಳಿಗೆ (Diabetes) ಇದು ಅತ್ಯುತ್ತಮ ಆಹಾರವಾಗಿದೆ.
Black Beans A Powerhouse of Nutrients

ಜೀರ್ಣಕ್ರಿಯೆ ಸುಧಾರಣೆ

ಬ್ಲ್ಯಾಕ್ ಬೀನ್ಸ್​​ನಲ್ಲಿರುವ ಅಧಿಕ ನಾರಿನಂಶ (Fiber) ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
Black Beans A Powerhouse of Nutrients

ತೂಕ ಇಳಿಕೆಗೆ ಪೂರಕ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬ್ಲ್ಯಾಕ್ ಬೀನ್ಸ್​​ನಲ್ಲಿ ಉತ್ತಮ ಆಯ್ಕೆ. ಇವುಗಳನ್ನು ಸೇವಿಸಿದ ಬಳಿಕ ಹೊಟ್ಟೆ ತುಂಬಿದ ಅನುಭವ ದೀರ್ಘಕಾಲದವರೆಗೆ ಇರುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗಿ, ಕ್ಯಾಲೋರಿ ಸೇವನೆ ನಿಯಂತ್ರಣಕ್ಕೆ ಬರುತ್ತದೆ.
Black Beans A Powerhouse of Nutrients

ಕ್ಯಾನ್ಸರ್ ತಡೆಗಟ್ಟುವಿಕೆ

ಬ್ಲ್ಯಾಕ್ ಬೀನ್ಸ್​​ನಲ್ಲಿ ಎಂಟು ವಿಧದ ಫ್ಲೇವನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇವು ದೇಹದಲ್ಲಿರುವ ಹಾನಿಕಾರಕ ಮುಕ್ತ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ವಿಶೇಷವಾಗಿ ಕೊಲೊನ್ ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net