ಪಪ್ಪಾಯಿ ಬೀಜಗಳಲ್ಲಿ ಪಪೈನ್ ಎಂಬ ಶಕ್ತಿಯುತ ಕಿಣ್ವವಿದೆ. ಇದು ನಾವು ಸೇವಿಸುವ ಪ್ರೋಟೀನ್‌ಗಳನ್ನು ಸುಲಭವಾಗಿ ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ಅಜೀರ್ಣ, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ.
ಜಂತುಹುಳುಗಳು ನಾಶ
ಈ ಬೀಜಗಳಲ್ಲಿ ಕಾರ್ಪೈನ್ ಎಂಬ ಸಂಯುಕ್ತವಿದ್ದು, ಇದು ಕರುಳಿನಲ್ಲಿರುವ ಅಪಾಯಕಾರಿ ಜಂತುಹುಳುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಸೋಂಕಿನಿಂದ ಬಳಲುತ್ತಿರುವವರಿಗೆ ಇದು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ.
ಲಿವರ್ ರಕ್ಷಣೆ
ಯಕೃತ್ತಿನ ಕಾಯಿಲೆಗಳಾದ ಲಿವರ್ ಸಿರೋಸಿಸ್ ಚಿಕಿತ್ಸೆಯಲ್ಲಿ ಪಪ್ಪಾಯಿ ಬೀಜಗಳು ಸಹಕಾರಿ ಎಂದು ಸಂಶೋಧನೆಗಳು ತಿಳಿಸಿವೆ. ಇದು ಯಕೃತ್ತಿನಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ, ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಮೂತ್ರಪಿಂಡದ ಆರೋಗ್ಯ
ಕಿಡ್ನಿ ವೈಫಲ್ಯವನ್ನು ತಡೆಗಟ್ಟಲು ಮತ್ತು ಮೂತ್ರಪಿಂಡಗಳ ಸರಿಯಾದ ಕಾರ್ಯನಿರ್ವಹಣೆಗೆ ಪಪ್ಪಾಯಿ ಬೀಜಗಳು ಉತ್ತೇಜನ ನೀಡುತ್ತವೆ. ಇವುಗಳಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಮೂತ್ರಪಿಂಡದ ಕೋಶಗಳು ಹಾನಿಯಾಗದಂತೆ ರಕ್ಷಿಸುತ್ತವೆ.
ಕ್ಯಾನ್ಸರ್ ವಿರೋಧಿ ಗುಣ
ಪಪ್ಪಾಯಿ ಬೀಜಗಳಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಇವುಗಳಲ್ಲಿರುವ ಐಸೊಥಿಯೋಸೈನೇಟ್ ಎಂಬ ಅಂಶವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ನಂಬಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News