
ಚಳಿಗಾಲದಲ್ಲಿ ಸಾಮಾನ್ಯವಾಗಿ ಕೂದಲು ಒರಟಾಗುವುದು, ಜಿಗುಟಾಗುವುದು, ತಲೆ ಹೊಟ್ಟು, ಕೂದಲು ಉದುರುವಿಕೆ ಸಾಮಾನ್ಯ. ಇದಕ್ಕಾಗಿ ಕೂದಲಿನ ಪೋಷಣೆ ಹೆಚ್ಚು ಅತ್ಯಗತ್ಯ. ನೆತ್ತಿಯಲ್ಲಿ ರಕ್ತ ಸಂಚಲಮ, ಹೈಡ್ರೇಟ್ ಆಗಿಟ್ಟುಕೊಳ್ಳುವಂತೆ ಕೇರ್ ಮಾಡುವ ಅವಶ್ಯಕತೆ ಇದೆ. ಹೀಗಾಗಿ ದುಬಾರಿ ಕ್ರೀಂ, ಪಾರ್ಲರ್ಗಳಿಗೆ ಸುತ್ತಾಡಬೇಕು ಎನ್ನುವ ಗೋಜಲು ಇಲ್ಲ. ಮನೆಯಲ್ಲಿಯೇ ಕೆಲವೊಂದು ಸೂಕ್ತ ಹೇರ್ ಮಾಸ್ಕ್ ತಯಾರಿಸಿ ಹಚ್ಚಿಕೊಳ್ಳುವುದು ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಕಡಿಮೆ ದರಕ್ಕೆ ಸಿಗುವ ಹಣ್ಣು ಬಾಳೆ. ಹೀಗಾಗಿ ಪ್ರತಿಯೊಬ್ಬರು ಇದನ್ನು ಕೊಂಡುಕೊಂಡು ಸೇವಿಸುತ್ತಾರೆ. ಈ ಬಾಳೆ ಹಣ್ಣಿನ ಸಿಪ್ಪೆ ತಿಂದ ನಂತರ ಬಿಸಾಡುವ ಬದಲಾಗಿ ಅದನ್ನು ಕೂದಲಿನ ಆರೈಕೆಗೆ ಬಳಕೆ ಮಾಡಿ...ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರಿಗೆ ಎರಡರಿಂದ ಮೂರು ಬಾಳೆ ಹಣ್ಣಿನ ಸಿಪ್ಪೆಗಳನ್ನು ಕಟ್ ಮಾಡಿ ಹಾಕಿ. ಇದನ್ನು ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ಕುದಿಸಿ...ಚೆನ್ನಾಗಿ ಕುದ್ದ ನಂತರ ಪಾತ್ರೆಯನ್ನು ತೆಗೆದು ಪಕ್ಕಕ್ಕೆ ಇಟ್ಟು ನೀರು ತಣ್ಣಗಾಗಲು ಬಿಡಿ. ಈಗ ನೀರನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಶೇಖರಿಸಿ. ನೆನಪಿಡಿ ನೀವು ಈ ನೀರನ್ನು ಬಳಕೆ ಮಾಡುವಾಗ ಮಾತ್ರ ಬಾಳೆ ಹಣ್ಣಿನ ಸಿಪ್ಪೆ ನೀರನ್ನು ಕುದಿಸಿ ತಲೆಗೆ ಅಪ್ಲೈ ಮಾಡಿ. ಅದಕ್ಕೂ ಮುನ್ನ ಮಾಡಿ ಶೇಖರಿಸಿಟ್ಟರೆ...ದುರ್ನಾತ ಬರುವ ಸಾಧ್ಯತೆ ಇರುತ್ತದೆ.
ನೀವು ತಲೆಗೆ ಸ್ನಾನ ಮಾಡಿದ ನಂತರ ಬಾಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸಲಾದ ನೀರಿನ ಸ್ಪ್ರೇ ಅನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆ ಬಿಡಿ..ಆನಂತರ ಸಾಮಾನ್ಯ ನೀರಿನಲ್ಲಿ ತೊಳೆದುಕೊಳ್ಳಿ. ಹೀಗೆ ನೀವು ತಲೆ ಸ್ನಾನ ಮಾಡಿದಾಗೆಲ್ಲ ಬಳಕೆ ಮಾಡಿದರೆ...ತುರಿಕೆ, ಹೊಟ್ಟು ಸಮಸ್ಯೆಗಳು ದೂರವಾಗುತ್ತದೆ.
ಬಾಳೆ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶವು ಹೇರಳವಾಗಿದೆ. ಕೂದಲಿನ ಕಿರು ಚೀಲವನ್ನು ಬಲ ಪಡಿಸುತ್ತದೆ. ಕೂದಲಿನ ಕಂಡೀಷನರ್ ಆಗಿ ಇದು ಕೆಲಸ ಮಾಡುತ್ತದೆ. ಒಣ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಅಲ್ಲದೇ ಇದರಲ್ಲಿವು ಆಂಟಿ ಮೈಕ್ರೋಬಿಯಲ್ ಅಂಶವು ತುರಿಕೆ, ಹೊಟ್ಟಿನಿಂದ ಮುಕ್ತಿ ನೀಡುವಂತೆ ಮಾಡುತ್ತದೆ.