ರೈಹಾನ್​ ಲವ್ಸ್​ ಅವಿವಾ​: ಪ್ರಿಯಾಂಕಾ ಗಾಂಧಿ ಭಾವಿ ಸೊಸೆಯ ಬೋಲ್ಡ್​ ಫೋಟೋಗಳು ವೈರಲ್! Aviva Baig

ಈಗ ಚಾಲ್ತಿಯಲ್ಲಿರೋದು ಒಂದೇ ಹೆಸರು
ಈಗ ಚಾಲ್ತಿಯಲ್ಲಿರೋದು ಒಂದೇ ಹೆಸರು
Published on
Aviva Baig

ಈಗ ಚಾಲ್ತಿಯಲ್ಲಿರೋದು ಒಂದೇ ಹೆಸರು

ಕಳೆದೊಂದು ದಿನದಿಂದ ಅವಿವಾ ಬೇಗ್ ( Aviva Baig )​ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್​ ವಾದ್ರಾ ಜತೆ ಅವಿವಾಗೆ ಎಂಗೇಜ್​ಮೆಂಟ್​ ಆಗಿದೆ ಅನ್ನೋದು.
Aviva Baig

ಅವಿವಾ ಫೋಟೋಗಳು ವೈರಲ್​

ಎಂಗೇಜ್​ಮೆಂಟ್​ ಬಗ್ಗೆ ಯಾವುಧೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಅನೇಕ ಮಾಧ್ಯಮಗಳು ಇಂಥದ್ದೊಂದು ಸುದ್ದಿಯನ್ನು ನಿನ್ನೆಯಿಂದ ಬಿತ್ತರಿಸಿವೆ. ಹೀಗಾಗಿ, ಅವಿವಾ ಯಾರೆಂದು ತಿಳಿದುಕೊಳ್ಳಲು ಅನೇಕ ಮಂದಿ ಜಾಲತಾಣವನ್ನು ಜಾಲಾಡುತ್ತಿದ್ದಾರೆ. ಇದರ ನಡುವೆ ಅವಿವಾಗೆ ಸಂಬಂಧಿಸಿದ ಬೋಲ್ಡ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.
Aviva Baig

ಯಾರು ಈ ಅವಿವಾ?

ಅವಿವಾ ಬೇಗ್ ದೆಹಲಿಯ ವೃತ್ತಿಪರ ಛಾಯಾಗ್ರಾಹಕಿ​. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಬೇಗ್​ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮುಗಿಸಿದ್ದಾರೆ. ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು.
Aviva Baig

ಅಟೆಲಿಯರ್ 11ರ ಸಹ-ಸಂಸ್ಥಾಪಕಿ

ಉನ್ನತ ಶಿಕ್ಷಣ ಮುಗಿಸಿದ ಬಳಿಕ ಭಾರತದ ಏಜೆನ್ಸಿ, ಬ್ರ್ಯಾಂಡ್‌ಗಳು ಮತ್ತು ಅನೇಕ ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡುವ ಬ್ರ್ಯಾಂಡ್​ ಸ್ಟುಡಿಯೋ ಮತ್ತು ನಿರ್ಮಾಣ ಕಂಪನಿಯಾದ ಅಟೆಲಿಯರ್ 11ರ ಸಹ-ಸಂಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Aviva Baig

ಕ್ಯಾಮರಾ ಜಗತ್ತಿನಲ್ಲಿ ಬದುಕು

ಎಲ್ಲರಂತೆ ಸಿಂಪಲ್​ ಲೈವ್​ಸ್ಟೈಲ್​ ನಡೆಸುತ್ತಿರುವ ಅವರು, ಕ್ಯಾಮರಾ ಜಗತ್ತಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವುದು ವಿಶೇಷ. ಹಲವಾರು ಆರ್ಟ್​ ಗ್ಯಾಲರಿಗಳಲ್ಲಿ ತಮ್ಮ ಫೋಟೋಗಳನ್ನು ಪ್ರದರ್ಶಿಸಿರುವ ಅವಿವಾ, 'ವರ್ವ್‌'ನಂತಹ ಜನಪ್ರಿಯ ಮ್ಯಾಗ್​ಜೀನ್​ಗಳಲ್ಲಿ ಕೆಲಸ ಮಾಡಿದ್ದಾರೆ.
Aviva Baig

ತಮ್ಮ ಫೋಟೋಗಳ ಪ್ರದರ್ಶನ

ಮೆಥಡ್ ಗ್ಯಾಲರಿಯೊಂದಿಗೆ ಯು ಕ್ಯಾಂಟ್ ಮಿಸ್ ದಿಸ್', ಇಂಡಿಯಾ ಆರ್ಟ್ ಫೇರ್ ಯಂಗ್ ಕಲೆಕ್ಟರ್ ಪ್ರೋಗ್ರಾಂನ ಭಾಗವಾಗಿ ಯು ಕ್ಯಾಂಟ್ ಮಿಸ್ ದಿಸ್, ದಿ ಕ್ವಾರಮ್ ಕ್ಲಬ್‌ನಲ್ಲಿ 'ದಿ ಇಲ್ಯೂಸರಿ ವರ್ಲ್ಡ್', ಇಂಡಿಯಾ ಡಿಸೈನ್ ಐಡಿ, ಕೆ2 ಇಂಡಿಯಾ (2018) ರಲ್ಲಿ ದಿ ಇಲ್ಯೂಸರಿ ವರ್ಲ್ಡ್ ಮುಂತಾದ ಪ್ರದರ್ಶನಗಳಲ್ಲಿ ಫೋಟೋಗಳನ್ನು ಪ್ರದರ್ಶಿಸಿದ್ದಾರೆ.
Aviva Baig

ಪ್ರಧಾನ ಸಂಪಾದಕಿ

ಪ್ರಸ್ತುತ, ಐ-ಪಾರ್ಲಿಮೆಂಟ್‌ನಲ್ಲಿ 'ದಿ ಜರ್ನಲ್'ನ ಪ್ರಧಾನ ಸಂಪಾದಕಿಯಾಗಿರುವ ಅವಿವಾ, ವರ್ವ್ ಮ್ಯಾಗಜೀನ್ ಇಂಡಿಯಾ ಮತ್ತು ಕ್ರಿಯೇಟಿವ್ ಇಮೇಜ್ ಮ್ಯಾಗಜೀನ್‌ನಲ್ಲಿ ಇಂಟರ್ನ್‌ಶಿಪ್‌ಗಳನ್ನು ಸಹ ಪೂರ್ಣಗೊಳಿಸಿದ್ದಾರೆ.
Aviva Baig

ರೈಹಾನ್ ವಾದ್ರಾ ಹಿನ್ನೆಲೆ

ರೈಹಾನ್ ವಾದ್ರಾ ಓರ್ವ ವಿಸ್ಯುವಲ್​ ಆರ್ಟಿಸ್ಟ್​. ಕಳೆದ ಹತ್ತು ವರ್ಷದಿಂದಲೂ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತನ್ನು ಸೆರೆಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ.
Aviva Baig

ಫೋಟೋಗ್ರಫಿ

ಮುಂಬೈನ ಕೊಲಾಬಾದಲ್ಲಿರುವ ಆರ್ಟ್​ ಗ್ಯಾಲರಿ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ರೈಹಾನ್​ ಅವರು ವನ್ಯಜೀವಿಗಳನ್ನು, ಬೀದಿ ಬದಿಯಲ್ಲಿ ಕಾಣ ಸಿಗುವ ಅಪರೂಪದ ಕ್ಷಣಗಳನ್ನು ಮತ್ತು ಕಮರ್ಷಿಯಲ್​ ಫೋಟೋಗ್ರಫಿಯನ್ನು ಮಾಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net