ಅಸ್ತಮಾ ಇದ್ರೆ ಚಳಿಗಾಲದಲ್ಲಿ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ...Asthma

ಮುನ್ನೆಚ್ಚರಿಕೆ ಇರಲಿ
ಮುನ್ನೆಚ್ಚರಿಕೆ ಇರಲಿ
Published on
Asthma

ಮುನ್ನೆಚ್ಚರಿಕೆ ಇರಲಿ

ಚಳಿಗಾಲದಲ್ಲಿ ಗಾಳಿಯು ತಂಪಾಗಿರುತ್ತದೆ ಮತ್ತು ಒಣಗಿರುತ್ತದೆ. ಇದು ಅಸ್ತಮಾ ರೋಗಿಗಳ ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಹೀಗಾಗಿ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ.
Asthma

ಬೆಚ್ಚಗಿನ ಉಡುಪು ಧರಿಸಿ

ಚಳಿಯಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ವಿಶೇಷವಾಗಿ ಹೊರಗಡೆ ಹೋಗುವಾಗ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ತಂಪು ಗಾಳಿ ತಗುಲದಂತೆ ಸ್ಕಾರ್ಫ್ ಅಥವಾ ಮಫ್ಲರ್ ಬಳಸಿ.
Asthma

ಮೂಗಿನ ಮೂಲಕ ಉಸಿರಾಡಿ

ಬಾಯಿಯ ಮೂಲಕ ಉಸಿರಾಡುವುದರಿಂದ ತಣ್ಣನೆ ಗಾಳಿ ನೇರವಾಗಿ ಶ್ವಾಸಕೋಶ ಸೇರುತ್ತದೆ. ಮೂಗಿನಲ್ಲಿ ಉಸಿರಾಡಿದಾಗ, ಗಾಳಿಯು ಶ್ವಾಸಕೋಶಕ್ಕೆ ತಲುಪುವ ಮೊದಲು ಸ್ವಲ್ಪ ಬೆಚ್ಚಗಾಗುತ್ತದೆ. ಇದು ಶ್ವಾಸನಾಳದ ಕಿರಿಕಿರಿ ತಪ್ಪಿಸುತ್ತದೆ.
Asthma

ಇನ್ಹೇಲರ್ ಸದಾ ಜೊತೆಗಿರಲಿ

ಚಳಿಗಾಲದಲ್ಲಿ ಅಸ್ತಮಾ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಆದ್ದರಿಂದ ನಿಮ್ಮ ವೈದ್ಯರು ಸೂಚಿಸಿದ ರಿಲೀಫರ್ ಇನ್ಹೇಲರ್ ಅನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ.
Asthma

ಅಲರ್ಜಿ ಕಾರಕಗಳಿಂದ ದೂರವಿರಿ

ಈ ಸಮಯದಲ್ಲಿ ಧೂಳು, ಹೊಗೆ ಮತ್ತು ಮಂಜು ಹೆಚ್ಚಾಗಿರುತ್ತದೆ. ಬೆಳಗ್ಗೆ ಬೇಗ ಮತ್ತು ರಾತ್ರಿ ತಡವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಮನೆಯೊಳಗೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ.
Asthma

ಹಬೆ ತೆಗೆದುಕೊಳ್ಳಿ

ಶ್ವಾಸನಾಳದ ಬಿಗಿತವನ್ನು ಕಡಿಮೆ ಮಾಡಲು ಮತ್ತು ಕಟ್ಟಿದ ಮೂಗನ್ನು ಸಡಿಲಗೊಳಿಸಲು ದಿನಕ್ಕೆ ಒಂದು ಅಥವಾ ಎರಡು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು ತುಂಬಾ ಪ್ರಯೋಜನಕಾರಿ.
Asthma

ಸಮತೋಲಿತ ಆಹಾರ ಮತ್ತು ಬಿಸಿ ನೀರು

ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ಯಾವಾಗಲೂ ಉಗುರುಬೆಚ್ಚಗಿನ ನೀರು ಕುಡಿಯಿರಿ. ಇದು ಗಂಟಲು ಮತ್ತು ಶ್ವಾಸನಾಳವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ.
Asthma

ಮನೆಯ ಒಳಗಿನ ಗಾಳಿಯ ಶುದ್ಧತೆ

ಮನೆಯೊಳಗೆ ಅಗರಬತ್ತಿ ಹೊಗೆ, ಸಾಂಬ್ರಾಣಿ ಅಥವಾ ಸೊಳ್ಳೆ ಬತ್ತಿಗಳ ಹೊಗೆ ಇರದಂತೆ ನೋಡಿಕೊಳ್ಳಿ. ಗಾಳಿಯ ಗುಣಮಟ್ಟ ಕಳಪೆಯಾಗಿದ್ದರೆ ಮನೆಯ ಕಿಟಕಿಗಳನ್ನು ಮುಚ್ಚಿಡುವುದು ಉತ್ತಮ.
Asthma

ಗಮನಿಸಿ

ಉಸಿರಾಟದ ತೊಂದರೆ ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net