ಯಾವಾಗಲೂ ಎಸಿಯಲ್ಲೇ ಇರ್ತೀರಾ? ಈ ಸದ್ದಿಲ್ಲದ ಅಪಾಯಗಳ ಬಗ್ಗೆ ಇಂದೇ ತಿಳಿದುಕೊಳ್ಳಿ! AC Side Effects

ಎಸಿ ಬಳಕೆ
ಎಸಿ ಬಳಕೆ
Published on
AC Side Effects

ಎಸಿ ಬಳಕೆ

ಎಸಿ ದೀರ್ಘಕಾಲ ಬಳಸಿದರೆ ಆಗುವಂತಹವುಗಳ ಬಗ್ಗೆ ಇಂದೇ ತಿಳಿದುಕೊಳ್ಳಿ. ಇವುಗಳು ತಕ್ಷಣ ಕಾಣದೇ ಇರಬಹುದು, ಆದರೆ ನಿಧಾನವಾಗಿ ಆರೋಗ್ಯವನ್ನು ಹಾಳುಮಾಡುತ್ತವೆ.
AC Side Effects

ಸಿಕ್ ಬಿಲ್ಡಿಂಗ್ ಸಿಂಡ್ರೋಮ್

ಎಸಿ ರೂಮ್‌ನಲ್ಲಿ ದೀರ್ಘಕಾಲ ಇದ್ದರೆ ತಲೆನೋವು, ತಲೆಸುತ್ತು, ಆಯಾಸ, ಗಮನ ಕೇಂದ್ರೀಕರಣದ ಕೊರತೆ, ಮೂಗು ತುಂಬಿಕೊಳ್ಳುವುದು, ಕೆಮ್ಮು – ಇವೆಲ್ಲಾ ಸದ್ದಿಲ್ಲದೇ ಬರುತ್ತವೆ. ಗಾಳಿ ಸರಿಯಾಗಿ ಸಂಚಾರವಿಲ್ಲದೇ ಒಣಗುವಿಕೆ, ಕೊಳಕು ಫಿಲ್ಟರ್‌ಗಳಿಂದ ಇದು ಹೆಚ್ಚುತ್ತದೆ.
AC Side Effects

ಉಸಿರಾಟದ ಸಮಸ್ಯೆಗಳು

ಎಸಿ ಗಾಳಿ ಮೂಗನ್ನು ಒಣಗಿಸಿ, ಧೂಳು ಮತ್ತು ಅಲರ್ಜಿಯನ್ನು ಹರಡುತ್ತದೆ. ದೀರ್ಘಕಾಲದಲ್ಲಿ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಸ್ತಮಾ, ಅಲರ್ಜಿ, ಸೈನಸ್, ಶೀತ-ಕೆಮ್ಮು ಸಮಸ್ಯೆಗಳು ಹೆಚ್ಚುತ್ತವೆ.
AC Side Effects

ಚರ್ಮ, ಕಣ್ಣು, ಗಂಟಲು ಹಾನಿ

ಎಸಿ ಹವೆಯ ಆರ್ದ್ರತೆಯನ್ನು ಕಡಿಮೆ ಮಾಡಿ ಚರ್ಮ ಒಣಗುವುದು, ಕಣ್ಣು ಕೆಂಪಾಗುವುದು, ಕಣ್ಣೀರು ಬರದೇ ಇರುವುದು, ಗಂಟಲು ಕೆರಳುವುದು, ಒಣ ಗಂಟಲಿಂನತಹ ಸಮಸ್ಯೆಗಳು ಕಂಡುಬರುತ್ತವೆ.
AC Side Effects

ಹಾರ್ಮೋನ್ ಅಸಮತೋಲನ

ತಂಪು ಗಾಳಿಯಿಂದ ದೇಹದ ತಾಪನಿಯಂತ್ರಣ ವ್ಯವಸ್ಥೆ ಒತ್ತಡಕ್ಕೊಳಗಾಗಿ, ಕಾರ್ಟಿಸಾಲ್ ಹಾರ್ಮೋನ್ ಹೆಚ್ಚಾಗಿ ಅಡ್ರಿನಲ್ ಫ್ಯಾಟಿಗ್ ಸಿಂಡ್ರೋಮ್‌ಗೆ ಕಾರಣವಾಗಬಹುದು. ಇದರಿಂದ ನಿರಂತರ ಆಯಾಸ, ನಿದ್ರೆಯ ಕೊರತೆ, ತೂಕ ಹೆಚ್ಚಾಗುತ್ತದೆ.
AC Side Effects

ರೋಗ ನಿರೋಧಕ ಶಕ್ತಿ ಕಡಿಮೆ

ಒಣಗುವಿಕೆ, ಕೊಳಕು ಗಾಳಿ, ಹಠಾತ್ ತಾಪಮಾನ ಬದಲಾವಣೆಗಳಿಂದ ದೇಹದ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ. ವೈರಲ್ ಇನ್‌ಫೆಕ್ಷನ್‌ಗಳು ಸುಲಭವಾಗಿ ಬರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net