ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರ ಸಾಮಾನ್ಯ. ವಾಲ್ನಟ್ಸ್‌ನಲ್ಲಿರುವ ಜಿಂಕ್, ವಿಟಮಿನ್ E ಮತ್ತು ಆಂಟಿ ಆಕ್ಸಿಡೆಂಟ್‌ಗಳು ರೋಗನಿರೋಧಕ ಕೋಶಗಳನ್ನು ಬಲಪಡಿಸಿ ಸೋಂಕುಗಳಿಂದ ರಕ್ಷಣೆ ನೀಡುತ್ತವೆ.
ದೇಹಕ್ಕೆ ಬೆಚ್ಚಗಿನ ಶಕ್ತಿ ನೀಡುತ್ತದೆ
ಆರೋಗ್ಯಕರ ಫ್ಯಾಟ್‌ಗಳು ದೇಹದ ಉಷ್ಣತೆಯನ್ನು ನಿರ್ವಹಿಸಿ ಚಳಿಯನ್ನು ತಡೆಯುತ್ತವೆ. ಇದು ಚಳಿಗಾಲದಲ್ಲಿ ಆಯಾಸವನ್ನು ಕಡಿಮೆ ಮಾಡುತ್ತದೆ.
ಹೃದಯ ಆರೋಗ್ಯ ಸುಧಾರಿಸುತ್ತದೆ
ಒಮೆಗಾ-3 ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತವೆ. ಇದು ಚಳಿಯಲ್ಲಿ ಹೃದಯವನ್ನು ಬೆಚ್ಚಗಿರಿಸುತ್ತದೆ.
ಚರ್ಮದ ಆರೋಗ್ಯ ಕಾಪಾಡುತ್ತದೆ
ಚಳಿಗಾಲದಲ್ಲಿ ಚರ್ಮ ಒಣಗಿ, ಒಡಕು ಉಂಟಾಗುತ್ತದೆ. ವಿಟಮಿನ್ E ಮತ್ತು ಆಂಟೀಆಕ್ಸಿಡೆಂಟ್‌ಗಳು ಚರ್ಮವನ್ನು ತೇವಾಂಶಯುಕ್ತವಾಗಿ ಇರಿಸಿ ಉರಿಯೂತ ಕಡಿಮೆ ಮಾಡುತ್ತವೆ.
ಮೆದುಳಿನ ಆರೋಗ್ಯ ಸುಧಾರಿಸುತ್ತದೆ
ಒಮೆಗಾ-3 ಫ್ಯಾಟಿ ಆಸಿಡ್‌ಗಳು ಮಿದುಳಿನ ಕಾರ್ಯವನ್ನು ಬೆಂಬಲಿಸಿ ಚಳಿಗಾಲದ ಡಿಪ್ರೆಷನ್ ಕಡಿಮೆ ಮಾಡುತ್ತದೆ. ಜೊತೆಗೆ ಸ್ಮರಣೆ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ.
ತೂಕ ನಿಯಂತ್ರಣ ಮತ್ತು ಉರಿಯೂತ ಕಡಿಮೆ
ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್‌ಗಳು ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಜೊತೆಗೆ ಸಂಧಿ ನೋವುಗಳನ್ನು ಕಡಿಮೆ ಮಾಡುತ್ತದೆ.