ಚಳಿಗಾಲದಲ್ಲಿ ಶೇಂಗಾ ಬೀಜ ತಿನ್ನುವುದರಿಂದ ಇಷ್ಟೆಲ್ಲಾ ಲಾಭಗಳಿವೆಯಾ? peanuts

ಬಡವರ ಬಾದಾಮಿ ಶೇಂಗಾ
ಬಡವರ ಬಾದಾಮಿ ಶೇಂಗಾ
Published on
Peanuts

ಬಡವರ ಬಾದಾಮಿ ಶೇಂಗಾ

ಚಳಿಗಾಲದಲ್ಲಿ ಶೇಂಗಾ ಬೀಜವು ಬಹಳ ಜನಪ್ರಿಯ ತಿಂಡಿಯಾಗಿದೆ. ಇದನ್ನು ಹಲವಾರು ಜನರು ಟೈಮ್​​ ಪಾಸ್​ ಮಾಡಲು ಸೇವಿಸುತ್ತಾರೆ. ಇದು ರುಚಿಯ ಜೊತೆಗೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
Peanuts

ದೇಹವನ್ನು ಬೆಚ್ಚಗಿರಿಸುತ್ತದೆ

ಶೇಂಗಾದಲ್ಲಿ ಮೊನೊಅನ್‌ಸ್ಯಾಚುರೇಟೆಡ್ ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಇರುವುದರಿಂದ ಚಳಿಯಲ್ಲಿ ದೇಹಕ್ಕೆ ಉಷ್ಣತೆ ನೀಡುತ್ತದೆ ಮತ್ತು ಶಕ್ತಿಯನ್ನು ಕಾಯ್ದುಕೊಳ್ಳುತ್ತದೆ. ಹಾಗೆಯೇ ದೇಹವನ್ನು ಬೆಚ್ಚಗಿರಿಸುತ್ತದೆ.
Peanuts

ಶಕ್ತಿ ಮತ್ತು ಉತ್ಸಾಹ ನೀಡುತ್ತದೆ

ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಚಳಿಗಾಲದ ಸೋಂಕುತನ ಮತ್ತು ಆಯಾಸವನ್ನು ತಡೆಗಟ್ಟಿ, ದೇಹಕ್ಕೆ ದೀರ್ಘಕಾಲ ಶಕ್ತಿಯನ್ನು ನೀಡುತ್ತದೆ.
Peanuts

ಹೃದಯ ಆರೋಗ್ಯಕ್ಕೆ ಒಳ್ಳೆಯದು

ನಿಯಮಿತ ಶೇಂಗಾದ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗಗಳ ಅಪಾಯ ಕಡಿಮೆಯಾಗುತ್ತದೆ.
Peanuts

ಸಾಮರ್ಥ್ಯ ಹೆಚ್ಚಿಸುತ್ತದೆ

ವಿಟಮಿನ್ E, ಮೆಗ್ನೀಷಿಯಂ ಮತ್ತು ಆಂಟೀಆಕ್ಸಿಡೆಂಟ್‌ಗಳಿಂದ ಚಳಿಗಾಲದ ಶೀತ, ಜ್ವರ ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ. ದೇಹಕ್ಕೆ ಬೇಕಾದ ಸಾಮರ್ಥ್ಯ ಹೆಚ್ಚಿಸುತ್ತದೆ.
Peanuts

ತ್ವಚೆ ಮತ್ತು ಕೂದಲಿಗೆ ಒಳ್ಳೆಯದು

ಬಯೋಟಿನ್ ಮತ್ತು ವಿಟಮಿನ್ E ಇರುವುದರಿಂದ ಚಳಿಯಲ್ಲಿ ಒಣಗುವ ತ್ವಚೆಗೆ ತೇವಾಂಶ ನೀಡಿ, ಆರ್ದ್ರತೆ ಕಾಯ್ದುಕೊಳ್ಳುತ್ತದೆ ಮತ್ತು ಕೂದಲನ್ನು ಬಲಪಡಿಸಿ, ಉದುರುವುದನ್ನು ಕಡಿಮೆ ಮಾಡುತ್ತದೆ.
Peanuts

ತೂಕ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೆ ಸಹಾಯ

ಫೈಬರ್ ಮತ್ತು ಪ್ರೋಟೀನ್‌ನಿಂದ ಹೊಟ್ಟೆ ತುಂಬಿದ ಭಾವನೆ ನೀಡಿ, ಅತಿಯಾಗಿ ತಿನ್ನುವುದನ್ನು ತಡೆಗಟ್ಟುತ್ತದೆ. ಇದರಿಂದ ಜೀರ್ಣಕ್ರಿಯೆ ಸುಗಮಗೊಳಿಸಿ, ತೂಕ ನಿಯಂತ್ರಣದಲ್ಲಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net