ನಟಿ ಅನುಪಮಾ ಪರಮೇಶ್ವರನ್ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ದಿವಂಗತ ನಟ ಪುನೀತ್ರಾಜ್ಕುಮಾರ್ ಅವರಿಗೆ ನಟ ಸಾರ್ವಭೌಮ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿ ಕನ್ನಡಿಗರಿಗೆ ಪರಿಚಯವಾಗಿದ್ದಾರೆ.
ಗುಂಗುರು ಕೂದಲೇ ಆಕರ್ಷಣೆ
ಅನುಪಮಾ ಸೌಂದರ್ಯಕ್ಕೆ ಎಷ್ಟು ಅಭಿಮಾನಿಗಳಿದ್ದಾರೋ ಅವರ ಗುಂಗುರು ಕೂದಲಿಗೂ ಅಷ್ಟೇ ಅಭಿಮಾನಿಗಳಿದ್ದಾರೆ. ಅವರು ಯಾವುದೇ ಫೋಟೋ ಹಂಚಿಕೊಂಡರೂ ಅವರ ತಲೆಕೂದಲಿನ ಬಗ್ಗೆ ಒಂದಿಷ್ಟು ಮಂದಿ ಕಾಮೆಂಟ್ ಮಾಡುತ್ತಾರೆ.
ಅಂದ ಹೆಚ್ಚಿಸಿದ ಗುಂಗುರು ಕೂದಲು
ದಕ್ಷಿಣದ ಭಾರತ ಚಿತ್ರರಂಗದ ಬಹಳಷ್ಟು ನಟಿಯರಿಗೆ ಸುಂದರವಾದ ಗುಂಗುರು ಕೂದಲು ಇದೆ, ನಿತ್ಯಾ ಮೆನನ್, ತಾಪ್ಸಿ ಮತ್ತು ಇನ್ನೂ ಅನೇಕರು ಕರ್ಲಿ ಹೇರ್ ಹೊಂದಿದ್ದಾರೆ. ಆದರೆ, ಅನುಪಮಾ ಪರಮೇಶ್ವರನ್ ಅವರಿಗಿರುವ ಗುಂಗುರು ಕೂದಲು ತುಂಬಾ ವಿಭಿನ್ನವಾಗಿದೆ.
ಅಭಿಮಾನಿಗಳು ಫಿದಾ
ಅನುಪಮಾ ಅವರ ಮುಖಕ್ಕೆ ಗುಂಗುರು ಕೂದಲು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದೀಗ ಮತ್ತೊಮ್ಮೆ, ತಮ್ಮ ಗುಂಗುರು ಕೂದಲಿನಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನುಪಮಾರ ಫೋಟೋ ನೋಡಿದ ಕೂಡಲೇ ಫಿದಾ ಆಗಿರುವ ಅಭಿಮಾನಿಗಳು ಗುಂಗುರು ಕೂದಲು ನಿಮಗೆ ಹೋಲುವ ರೀತಿ ಯಾರಿಗೂ ಹೋಲಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಮಾದಕ ನಗು
ಹೊಸ ಫೋಟೋಗಳಲ್ಲಿ ಗಾಢ ಗುಲಾಬಿ ಬಣ್ಣದ ಸೀರೆಯನ್ನು ಸ್ಲೀವ್ಲೆಸ್ ಬ್ಲೌಸ್‌ನೊಂದಿಗೆ ಅನುಪಮಾ ಧರಿಸಿದ್ದಾರೆ. ಪ್ರತಿ ಫೋಟೋದಲ್ಲೂ ನಗು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.