ಬಾಲ್ಯದಲ್ಲಿ ತಾಯಿಗೆ ಕೊಟ್ಟ ಮಾತು ಈಡೇರಿಸಿದ ನಟಿ​

12ನೇ ವಯಸ್ಸಿನಲ್ಲಿ ಅಮ್ಮನಿಗೆ ಕೊಟ್ಟ ಮಾತನ್ನು ಈಡೇರಿಸಿದರು ಮೃನಾಲ್​
12ನೇ ವಯಸ್ಸಿನಲ್ಲಿ ಅಮ್ಮನಿಗೆ ಕೊಟ್ಟ ಮಾತನ್ನು ಈಡೇರಿಸಿದರು ಮೃನಾಲ್​
Published on
Mrunal Thakur

12ನೇ ವಯಸ್ಸಿನಲ್ಲಿ ಅಮ್ಮನಿಗೆ ಕೊಟ್ಟ ಮಾತನ್ನು ಈಡೇರಿಸಿದರು ಮೃನಾಲ್​

ತೆಲುಗು ಚಿತ್ರರಂಗದ ತಾರೆ ಮೃನಾಲ್ ಠಾಕೂರ್ ಹೆಸರು ಕೇಳುತ್ತಿದ್ದಂತೆಯೇ 'ಸೀತಾ ರಾಮಂ' ಸಿನಿಮಾ ಒಂದು ನಿಮಿಷ ಕಣ್ಣ ಮುಂದೆ ಬರುತ್ತದೆ. ಈ ಚಿತ್ರದ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಚಿತ್ರರಸಿಕರ ಮನಸ್ಸು ಗೆದ್ದಿರುವ ಮೃನಾಲ್, ಸದ್ಯ ಹಲವಾರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
Mrunal Thakur

ಧಾರಾವಾಹಿಗಳಿಂದ ಸಿನಿಮಾ ಕಡೆಗೆ

ಆರಂಭದಲ್ಲಿ, ಧಾರಾವಾಹಿಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಈ ಬೆಡಗಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಲು ಅನೇಕರು ಹಿಂಜರಿದರು. ಆದರೆ, ತಮ್ಮ ಪ್ರತಿಭೆಯಿಂದ ಇಂದು ಅವರಿಗೆಲ್ಲ ಖಡಕ್ ಉತ್ತರ ಕೊಟ್ಟಿರುವ ಮೃನಾಲ್​, ಅಂದು ತಮ್ಮ ತಾಯಿಗೆ ಸಂಬಂಧಿಕರು ಮಾಡಿದ ಅವಮಾನಕ್ಕೆ ಐಷಾರಾಮಿ ಕಾರು ಖರೀದಿಸುವ ಮೂಲಕ ಮುಖಕ್ಕೆ ಹೊಡೆದಂತೆ ಉತ್ತರ ನೀಡಿದರು.
Mrunal Thakur

ದುಬಾರಿ ಮೌಲ್ಯದ ಮರ್ಸಿಡಿಸ್​ ಕಾರು

2023ರ ಫೆಬ್ರವರಿ ತಿಂಗಳಲ್ಲಿ ದುಬಾರಿ ಮೌಲ್ಯದ ಮರ್ಸಿಡಿಸ್​ ಬೆನ್ಜ್​ ಕಾರು ಖರೀದಿ ಮಾಡಿದ ಮೃನಾಲ್​, ಐಷಾರಾಮಿ ಕಾರನ್ನೇ ಏಕೆ ಕೊಂಡುಕೊಂಡಿದ್ದು ಎಂಬುದರ ಹಿಂದಿರುವ ನೋವಿನ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡರು. "ನಾನು ಬಡತನದಲ್ಲಿ ಜನಿಸಿದೆ. ನನ್ನ ತಾಯಿ ನನ್ನನ್ನು ಬೆಳೆಸಲು ಮತ್ತು ಕುಟುಂಬವನ್ನು ನಡೆಸಲು ತುಂಬಾ ಕಷ್ಟಪಟ್ಟಿದ್ದಾರೆ. ಅವೆಲ್ಲದರ ನಡುವೆಯೂ ನನ್ನಮ್ಮ
Mrunal Thakur

ಅವರ ಕಾರಿನಲ್ಲಿ ತಾಯಿಯನ್ನು ಕೂರಿಸಲು ಇಷ್ಟಪಡಲಿಲ್ಲ

ನಮ್ಮ ಸಂಬಂಧಿಕರು ನಮ್ಮನ್ನು ಕೀಳಾಗಿ ಕಾಣುತ್ತಿದ್ದರು. ಅವರು ಆಗಾಗ್ಗೆ ನಮ್ಮನ್ನೆಲ್ಲ ಅವಮಾನಿಸುತ್ತಿದ್ದರು. ಸಂಬಂಧಿಕರು ನನ್ನ ತಾಯಿಯನ್ನು ಅವರ ಕಾರಿನಲ್ಲಿ ಕೂರಿಸಲು ಇಷ್ಟಪಡಲಿಲ್ಲ. ಇಲ್ಲಿ ಕುಳಿತು ಪ್ರಯಾಣಿಸುವುದಕ್ಕೆ ಅರ್ಹರಲ್ಲ ಎಂದು ಅವಮಾನಿಸಿದ್ದರು. ಅಮ್ಮನನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರು. ಆ ಘಟನೆ ನಿಜವಾಗಿಯೂ ಭಾರೀ ಘಾಸಿ ಮಾಡಿತು.
Mrunal Thakur

ಕಡೆಗೂ ನನಸಾಯಿತು ಕನಸು

ನನ್ನ ಆ ಕನಸು ಕಡೆಗೂ ನನಸಾಯಿತು. ನನ್ನ ತಾಯಿಯನ್ನು ಅವಮಾನಿಸಿದ ಯಾರೊಬ್ಬರ ಬಳಿಯೂ ಬೆನ್ಜ್​ ಕಾರಿಲ್ಲ. ನಮ್ಮ ಇಡೀ ಕುಟುಂಬದಲ್ಲಿ ಈ ಕಾರನ್ನು ಹೊಂದುವುದರಲ್ಲಿ ನಾನೇ ಮೊದಲು ಎಂದು ಮೃನಾಲ್​ ಹೇಳಿಕೊಂಡಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net