ಅಭಿಮಾನಿಗಳಿಗೆ ಬುದ್ಧಿ ಮಾತು ಹೇಳಿದ ತಮಿಳು ನಟ ಶಿವಕಾರ್ತಿಕೆಯನ್​

ದೇವರು, ತಂದೆ-ತಾಯಿ ಮೊದಲು
ದೇವರು, ತಂದೆ-ತಾಯಿ ಮೊದಲು
Published on
Sivakarthikeyan

ದೇವರು, ತಂದೆ-ತಾಯಿ ಮೊದಲು

'ರೆಮೋ', 'ಅಮರನ್'​, 'ಮದರಾಸಿ' ಸೇರಿ ಹಲವಾರು ಬ್ಲಾಕ್​ಬಸ್ಟರ್​ ಹಿಟ್​ ಚಿತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ, ಅವರಿಂದ ಮೆಚ್ಚುಗೆ ಪಡೆದಿರುವ ತಮಿಳು ಚಿತ್ರರಂಗದ ಸ್ಟಾರ್​ ನಟ ಶಿವಕಾರ್ತಿಕೆಯನ್​, ಇದೀಗ ತಮ್ಮ ಫ್ಯಾನ್ಸ್​ಗೆ ವಿಶೇಷ ಮನವಿ ಹಾಗೂ ಸಂದೇಶವನ್ನು ನೀಡಿದ್ದಾರೆ.
Sivakarthikeyan

ಇಂಟರ್​ನೆಟ್​ ಬಳಕೆ ಬಗ್ಗೆ ಕಿವಿಮಾತು

ಚೆನ್ನೈನಲ್ಲಿ ನಡೆದ ಫ್ಯಾನ್ಲಿ ಎಂಟರ್ಟೈನ್ಮೆಂಟ್ ಪ್ಲಾಟ್‌ಫಾರ್ಮ್ ಉದ್ಘಾಟನೆಯಲ್ಲಿ ಮನಬಿಚ್ಚಿ ಮಾತನಾಡಿದ ಶಿವಕಾರ್ತಿಕೆಯನ್​, ನನ್ನನ್ನು ಪೂಜಿಸುವ ಅಭಿಮಾನಿಗಳು ನನಗೆ ಬೇಡ. ಯಾರೆಲ್ಲ ನನ್ನ ಫ್ಯಾನ್​ ಎನ್ನುತ್ತಿರೋ, ಅವರೆಲ್ಲ ದೇವರು ಮತ್ತು ಹೆತ್ತವರನ್ನು ಮಾತ್ರ ಪೂಜಿಸಬೇಕು ಎಂದಿದ್ದಾರೆ.
Sivakarthikeyan

ಸೋಷಿಯಲ್​ ಮೀಡಿಯಾದಿಂದ ದಿಕ್ಕು ತಪ್ಪಬೇಡಿ

ಸೋಷಿಯಲ್​ ಮೀಡಿಯಾದಿಂದ ದಿಕ್ಕು ತಪ್ಪಬೇಡಿ. ಆದಷ್ಟು ಒಳ್ಳೆಯ ರೀತಿಯಲ್ಲಿ ಅದನ್ನು ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ನೀಡಿದರು. ಈ ಕಾರ್ಯಕ್ರಮದಲ್ಲಿ, ಶಿವಕಾರ್ತಿಕೆಯನ್​ ಜತೆ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲ ಗೋಪಿಚಂದ್ ಮತ್ತು ಚೆಸ್ ಚಾಂಪಿಯನ್​ ಗುಕೇಶ್ ದೊಮ್ಮರಾಜು ಉಪಸ್ಥಿತರಿದ್ದರು.
Sivakarthikeyan

'ಪರಾಶಕ್ತಿ' ರಿಲೀಸ್​ಗೆ ರೆಡಿ

ಪ್ರಸ್ತುತ, ತಮ್ಮ ಮುಂಬರುವ ಚಿತ್ರಗಳ ಕೆಲಸಗಳಲ್ಲಿ ನಿರತರಾಗಿರುವ ನಟ, ಸುಧಾ ಕೊಂಗಾರ ಅವರ 'ಪರಾಶಕ್ತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು 2026ರ ಜ.14ರಂದು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್​ ಆಗಲು ಸಜ್ಜಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net