ಅನ್ವೇಷಿ ಜೈನ್ ಹೆಸರು ಕನ್ನಡವರಿಗೆ ಗೊತ್ತಿಲದೇ ಇರಬಹುದು ಆದರೆ, ಅವರ ಮುಖ ಪರಿಚಯ ಕನ್ನಡಿಗರಿಗೆ ಇದೆ. ಏಕೆಂದರೆ, ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗಂತೂ ಅನ್ವೇಷಿ ಯಾರೆಂದು ಚೆನ್ನಾಗಿ ಗೊತ್ತಿರುತ್ತದೆ.
ನಟಿ, ಮಾಡೆಲ್ ಮತ್ತು ಗಾಯಕಿ
ಅಂದಹಾಗೆ, ಅನ್ವೇಷಿ ಜೈನ್ ಭಾರತೀಯ ನಟಿ, ಮಾಡೆಲ್ ಮತ್ತು ಗಾಯಕಿ. ಅಲ್ಲದೆ, ಸೋಶಿಯಲ್ ಮೀಡಿಯಾ ಇನ್ಫ್ಯುಯೆನ್ಸರ್ ಕೂಡ ಹೌದು. ಜಾಲತಾಣ ಮತ್ತು ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಹೆಚ್ಚು ಜನಪ್ರಿಯರಾಗಿದ್ದಾರೆ.
ಗಂಧಿ ಬಾತ್ ಜನಪ್ರಿಯತೆ
ಅನ್ವೇಷಿ ಜೈನ್ ಅವರು ಆಲ್ಟ್ ಬಾಲಾಜಿ (ALTBalaji) ಸಂಸ್ಥೆಯ 'ಗಂಧಿ ಬಾತ್' ಸೀಸನ್ 2 ರ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. ಈ ಸರಣಿಯಲ್ಲಿನ ಅವರ ನಟನೆ ಅವರಿಗೆ ರಾತ್ರೋರಾತ್ರಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ತಂದುಕೊಟ್ಟಿತು. ತುಂಬಾ ಬೋಲ್ಡ್ ಆಗಿ ಈ ವೆಬ್ ಸೀರೀಸ್ನಲ್ಲಿ ನಟಿಸಿದ್ದಾರೆ.
ಬೋಲ್ಡ್ ಪಾತ್ರಗಳು
ಮಾರ್ಟಿನ್, ರಾಮ್ ರಾವ್ ಆನ್ ಡ್ಯೂಟಿ, ಗುಲಾಬಿ, ಕಮಿಟ್ಮೆಂಟ್ ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನ್ವೇಷಿಯವರ ಮಾದಕ ಮೈಮಾಟದಿಂದಾಗಿ ತುಂಬಾ ಬೋಲ್ಡ್ ಪಾತ್ರಗಳಲ್ಲಿ ಅನ್ವೇಷಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.
ಅನ್ವೇಷಿ ಜೈನ್ ಆ್ಯಪ್
ಅನ್ವೇಷಿ ಅವರು ತಮ್ಮದೇ ಹೆಸರಿನ ವೈಯಕ್ತಿಕ ಮೊಬೈಲ್ ಅಪ್ಲಿಕೇಶನ್ ಹೊಂದಿದ್ದಾರೆ. ಈ ಆ್ಯಪ್ ಮೂಲಕ ಅವರು ನೇರವಾಗಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಾರೆ. ಒಂದು ಸಮಯದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ನಟಿಯರಲ್ಲಿ ಇವರು ಒಬ್ಬರಾಗಿದ್ದರು.
ವೈಯಕ್ತಿಕ ಹಿನ್ನೆಲೆ
ಅನ್ವೇಷಿ ಅವರು ಮಧ್ಯಪ್ರದೇಶದ ಖಜುರಾಹೊದವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಆದರೆ, ಮಾಧ್ಯಮ ಮತ್ತು ಗ್ಲಾಮರ್ ಪ್ರಪಂಚದ ಆಸಕ್ತಿಯಿಂದಾಗಿ ಮುಂಬೈಗೆ ಬಂದು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ.
ನಿರೂಪಕಿಯಾಗಿದ್ದರು
ನಟಿಯಾಗುವ ಮೊದಲು ಅನ್ವೇಷಿ ಅವರು ನೂರಾರು ಕಾರ್ಪೊರೇಟ್ ಶೋಗಳು ಮತ್ತು ಮದುವೆ ಸಮಾರಂಭಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಇವರು ಉತ್ತಮ ಗಾಯಕಿಯೂ ಹೌದು ಮತ್ತು ಆಗಾಗ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ.
ಹಾಟ್ ಫೋಟೋಗಳೇ ತುಂಬಿವೆ
ಅನ್ವೇಷಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ 6.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಸದಾ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಏರಿಸುತ್ತಿರುತ್ತಾರೆ. ಅವರ ಇನ್ಸ್ಟಾಗ್ರಾಂ ಪೂರ್ತಿ ಮಾದಕ ಫೋಟೋಗಳ ರಾಶಿಯೇ ತುಂಬಿ ತುಳುಕುತ್ತಿವೆ.