ಪೈಲಟ್ ಸ್ಮಿತ್ ಮಚ್ಚರ್​ರನ್ನು ಕೊಂಡಾಡಿದ ವಿಶ್ವ ಮಾಧ್ಯಮಗಳ ಪಟ್ಟಿ ಇಲ್ಲಿದೆ!

ಪೈಲಟ್ ಸ್ಮಿತ್ ಮಚ್ಚರ್​ರನ್ನು ಕೊಂಡಾಡಿದ ವಿಶ್ವ ಮಾಧ್ಯಮಗಳ ಪಟ್ಟಿ ಇಲ್ಲಿದೆ!

ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಸಹ-ಪೈಲಟ್‌ನಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡರೂ, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಮ್ಮ ಜೀವನ್ಮರಣದ ಹೋರಾಟದ ಮೂಲಕ 174 ಪ್ರಯಾಣಿಕರ ಪ್ರಾಣ ಉಳಿಸಿ ದೊಡ್ಡ ವಿಮಾನ ದುರಂತವನ್ನು ತಪ್ಪಿಸಿರುವುದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾಗಿದ್ದು, ಅದರ ತುಣುಕುಗಳು ಇಲ್ಲಿವೆ.

1. ಸಿಎನ್ಎನ್ (CNN)

WEB

ಸಿಎನ್ಎನ್ (CNN): ದುಬೈನಿಂದ ಟೆಲ್ ಅವಿವ್‌ಗೆ ಹಾರುತ್ತಿದ್ದ ವಿಮಾನದ ಅಪಹರಣದ ಯತ್ನವನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಕ್‌ಪಿಟ್ ಹೋರಾಟದ ವೇಳೆ ಮಧ್ಯಪ್ರವೇಶಿಸಿದ ಮಚ್ಚರ್ ಮತ್ತು ಪ್ರಯಾಣಿಕರನ್ನು ಹೀರೋಗಳು ಎಂದು ಬಣ್ಣಿಸಿದೆ.

2. ದಿ ಗಾರ್ಡಿಯನ್ (The Guardian)

ದಿ ಗಾರ್ಡಿಯನ್ (The Guardian)
ದಿ ಗಾರ್ಡಿಯನ್ (The Guardian)WEB

ವಿಮಾನವನ್ನು ಪತನಗೊಳಿಸಲು ಯತ್ನಿಸಿದ ದಾಳಿಕೋರನಿಂದ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ ಮಚ್ಚರ್ ಅವರನ್ನು ಹೀರೋ ಎಂದು ಶ್ಲಾಘಿಸಿದೆ.

3. ಬಿಬಿಸಿ (BBC)

ಬಿಬಿಸಿ (BBC)
ಬಿಬಿಸಿ (BBC)WEB

ಇಸ್ರೇಲ್ ಕಡೆಗೆ ಸಾಗುತ್ತಿದ್ದ ವಿಮಾನದಲ್ಲಿ ಇರಿಯಲ್ಪಟ್ಟ ಆ ಹೀರೋ ಭಾರತೀಯ ಪೈಲಟ್ ಯಾರು? ಎಂದು ಪ್ರಶ್ನಿಸುವ ಮೂಲಕ ಮಚ್ಚರ್ ಅವರ ಗುರುತು ಮತ್ತು ಅವರ ಸಾಹಸದ ಬಗ್ಗೆ ಗಮನಹರಿಸಿದೆ.

4. ರಾಯ್ಟರ್ಸ್ (Reuters)

ರಾಯ್ಟರ್ಸ್ (Reuters)
ರಾಯ್ಟರ್ಸ್ (Reuters)WEB

ಜವಳಿ ಇಂಜಿನಿಯರಿಂಗ್‌ನಿಂದ ಕಾಕ್‌ಪಿಟ್ ಹೀರೋವರೆಗೆ: ಫ್ಲೈದುಬೈ ಘಟನೆ ಬಳಿಕ ಭಾರತೀಯ ಪೈಲಟ್‌ಗೆ ಮೆಚ್ಚುಗೆ0 ಎಂಬ ಶೀರ್ಷಿಕೆಯೊಂದಿಗೆ ಅವರ ಜೀವನದ ಹಾದಿಯನ್ನು ಹೈಲೈಟ್ ಮಾಡಿದೆ.

5. ಅಸೋಸಿಯೇಟೆಡ್ ಪ್ರೆಸ್ (AP)

ಅಸೋಸಿಯೇಟೆಡ್ ಪ್ರೆಸ್ (AP)
ಅಸೋಸಿಯೇಟೆಡ್ ಪ್ರೆಸ್ (AP)WEB

ಇಸ್ರೇಲ್ ಕಡೆಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್‌‌ಪಿಟ್ ಇರಿತದ ವರದಿಯಲ್ಲಿ ಮಚ್ಚರ್ ಅವರನ್ನು ಹೀರೋ ಎಂದು ಬಣ್ಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net