ಊಟದ ನಂತರ 10 ನಿಮಿಷ ನಡಿಗೆ: ಆರೋಗ್ಯಕ್ಕೆ ವರದಾನ! Walking Benefits

10 ನಿಮಿಷಗಳ ನಡಿಗೆ
10 ನಿಮಿಷಗಳ ನಡಿಗೆ
Published on: 
Walking Benefits

10 ನಿಮಿಷಗಳ ನಡಿಗೆ

ಪ್ರತಿದಿನ ಊಟ ಮುಗಿಸಿದ ತಕ್ಷಣ ಹಾಸಿಗೆಗೆ ಶರಣಾಗುವ ಬದಲು, ಕೇವಲ 10 ನಿಮಿಷಗಳ ಕಾಲ ಲಘುವಾಗಿ ನಡೆಯುವ ಹವ್ಯಾಸ ಬೆಳೆಸಿಕೊಂಡರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಪ್ರಮುಖ ಪ್ರಯೋಜನಗಳು ಇಲ್ಲಿವೆ.
Walking Benefits

ಉತ್ತಮ ಜೀರ್ಣಕ್ರಿಯೆ

ಊಟದ ನಂತರದ ನಡಿಗೆಯು ಜಠರ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ತಿಂದ ಆಹಾರವು ಬೇಗನೆ ಮತ್ತು ಸರಾಗವಾಗಿ ಜೀರ್ಣವಾಗಿ, ಗ್ಯಾಸ್, ಅಸಿಡಿಟಿ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.
Walking Benefits

ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ

ಆಹಾರ ಸೇವಿಸಿದ ತಕ್ಷಣ ರಕ್ತದಲ್ಲಿ ಗ್ಲುಕೋಸ್ ಮಟ್ಟ ದಿಢೀರನೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಡೆಯುವುದರಿಂದ ಸ್ನಾಯುಗಳು ಆ ಗ್ಲುಕೋಸ್ ಅನ್ನು ಶಕ್ತಿಯಾಗಿ ಬಳಸಿಕೊಳ್ಳುತ್ತವೆ. ಇದು ಮಧುಮೇಹ ನಿಯಂತ್ರಣಕ್ಕೆ ರಾಮಬಾಣ.
Walking Benefits

ತೂಕ ನಿರ್ವಹಣೆಗೆ ಸಹಕಾರಿ

ಲಘು ನಡಿಗೆಯು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದು ಅನಗತ್ಯ ಕ್ಯಾಲೊರಿಗಳನ್ನು ಬರ್ನ್ ಮಾಡಲು ಮತ್ತು ಬೊಜ್ಜು ಕರಗಿಸಲು ನೆರವಾಗುತ್ತದೆ.
Walking Benefits

ಹೃದಯದ ಆರೋಗ್ಯ ವೃದ್ಧಿ

ದಿನನಿತ್ಯದ ಈ ಸಣ್ಣ ನಡಿಗೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು, ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
Walking Benefits

ಉತ್ತಮ ನಿದ್ರೆ ಮತ್ತು ಮಾನಸಿಕ ನೆಮ್ಮದಿ

ರಾತ್ರಿ ಊಟದ ನಂತರ ನಡೆಯುವುದರಿಂದ ದೇಹದಲ್ಲಿ 'ಹ್ಯಾಪಿ ಹಾರ್ಮೋನ್‌ಗಳು' ಬಿಡುಗಡೆಯಾಗುತ್ತವೆ. ಇದು ದಿನದ ಒತ್ತಡವನ್ನು ಕಡಿಮೆ ಮಾಡಿ, ರಾತ್ರಿ ನಿರಾಳವಾಗಿ ಗಾಢ ನಿದ್ರೆ ಬರುವಂತೆ ಮಾಡುತ್ತದೆ.