ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತಾದ 6 ಆಸಕ್ತಿದಾಯಕ ಸಂಗತಿಗಳು

ಐಸಿಎಸ್ (ICS) ಅಧಿಕಾರಕ್ಕೆ ರಾಜೀನಾಮೆ
ಐಸಿಎಸ್ (ICS) ಅಧಿಕಾರಕ್ಕೆ ರಾಜೀನಾಮೆ
Published on
ಐಸಿಎಸ್ (ICS) ಅಧಿಕಾರಕ್ಕೆ ರಾಜೀನಾಮೆ

ಐಸಿಎಸ್ (ICS) ಅಧಿಕಾರಕ್ಕೆ ರಾಜೀನಾಮೆ

ನೇತಾಜಿಯವರು ಅತ್ಯಂತ ಪ್ರತಿಭಾವಂತರಾಗಿದ್ದರು. ಅವರು 1920ರಲ್ಲಿ ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ 'ಇಂಡಿಯನ್ ಸಿವಿಲ್ ಸರ್ವಿಸ್' (ICS) ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದರು. ಆದರೆ, ಬ್ರಿಟಿಷರ ಅಡಿಯಲ್ಲಿ ಕೆಲಸ ಮಾಡಲು ಇಷ್ಟಪಡದ ಅವರು, ಆ ಉನ್ನತ ಉದ್ಯೋಗಕ್ಕೆ ರಾಜೀನಾಮೆ ನೀಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.
'ನೇತಾಜಿ' ಎಂಬ ಬಿರುದು ಸಿಕ್ಕಿದ್ದು ಎಲ್ಲಿ?

'ನೇತಾಜಿ' ಎಂಬ ಬಿರುದು ಸಿಕ್ಕಿದ್ದು ಎಲ್ಲಿ?

ಸುಭಾಷ್ ಚಂದ್ರ ಬೋಸ್ ಅವರಿಗೆ 'ನೇತಾಜಿ' ಎಂಬ ಗೌರವಯುತ ಬಿರುದು ಮೊದಲು ಬಂದಿದ್ದು ಜರ್ಮನಿಯಲ್ಲಿ. 1942ರಲ್ಲಿ ಜರ್ಮನಿಯಲ್ಲಿದ್ದ ಭಾರತೀಯ ಸೈನಿಕರು ಮತ್ತು ಅಲ್ಲಿನ ಭಾರತೀಯರು ಇವರನ್ನು ಪ್ರೀತಿಯಿಂದ 'ನೇತಾಜಿ' ಎಂದು ಕರೆಯಲು ಆರಂಭಿಸಿದರು.
ಮಹಾತ್ಮ ಗಾಂಧೀಜಿಗೆ 'ರಾಷ್ಟ್ರಪಿತ' ಎಂದು ಕರೆದವರು

ಮಹಾತ್ಮ ಗಾಂಧೀಜಿಗೆ 'ರಾಷ್ಟ್ರಪಿತ' ಎಂದು ಕರೆದವರು

ಗಾಂಧೀಜಿಯವರ ಅಹಿಂಸಾ ತತ್ವಗಳ ಬಗ್ಗೆ ನೇತಾಜಿಯವರಿಗೆ ಭಿನ್ನಾಭಿಪ್ರಾಯಗಳಿದ್ದರೂ, ಅವರ ಮೇಲೆ ಅಪಾರ ಗೌರವವಿತ್ತು. 1944ರಲ್ಲಿ ಸಿಂಗಾಪುರದ ರೇಡಿಯೋ ಮೂಲಕ ಮಾತನಾಡುತ್ತಾ ಗಾಂಧೀಜಿಯವರನ್ನು ಮೊದಲ ಬಾರಿಗೆ 'ರಾಷ್ಟ್ರಪಿತ' ಎಂದು ಸಂಬೋಧಿಸಿದವರು ನೇತಾಜಿಯವರೇ ಆಗಿದ್ದಾರೆ.
ಆಜಾದ್ ಹಿಂದ್ ಫೌಜ್ ಮತ್ತು ಮಹಿಳಾ ಸೈನ್ಯ

ಆಜಾದ್ ಹಿಂದ್ ಫೌಜ್ ಮತ್ತು ಮಹಿಳಾ ಸೈನ್ಯ

ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು (INA) ಬಲಿಷ್ಠಗೊಳಿಸಿದ್ದಲ್ಲದೆ, ಏಷ್ಯಾದಲ್ಲೇ ಮೊದಲ ಬಾರಿಗೆ 'ಝಾನ್ಸಿ ರಾಣಿ ರೆಜಿಮೆಂಟ್' ಎಂಬ ಮಹಿಳಾ ಸೈನ್ಯದ ತುಕಡಿಯನ್ನು ಕಟ್ಟಿದರು. ಸ್ತ್ರೀಯರೂ ಯುದ್ಧಭೂಮಿಯಲ್ಲಿ ಹೋರಾಡಬಲ್ಲರು ಎಂದು ಅವರು ಅಂದೇ ಜಗತ್ತಿಗೆ ತೋರಿಸಿಕೊಟ್ಟಿದ್ದರು.
ಒಂಬತ್ತು ಬಾರಿ ಜೈಲು ವಾಸ

ಒಂಬತ್ತು ಬಾರಿ ಜೈಲು ವಾಸ

ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ನೇತಾಜಿಯವರು 1921 ರಿಂದ 1941 ರ ಅವಧಿಯಲ್ಲಿ ಸುಮಾರು 11 ಬಾರಿ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸಿದ್ದರು. ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಅವರು ಭಾರತದಿಂದ ತಪ್ಪಿಸಿಕೊಂಡು ಹೋದ ಸಾಹಸ ಇಂದಿಗೂ ರೋಚಕವಾಗಿದೆ.
ವಿಶ್ವ ಯುದ್ಧದಲ್ಲಿ "ಶತ್ರುವಿನ ಶತ್ರು ಮಿತ್ರ"

ವಿಶ್ವ ಯುದ್ಧದಲ್ಲಿ "ಶತ್ರುವಿನ ಶತ್ರು ಮಿತ್ರ"

ಶತ್ರುವಿನ ಶತ್ರು ಮಿತ್ರಎಂಬ ತತ್ವವನ್ನು ಅನುಸರಿಸಿದ ನೇತಾಜಿ, ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಜರ್ಮನಿ ಮತ್ತು ಜಪಾನ್ ದೇಶಗಳ ನೆರವು ಪಡೆದರು. ರಷ್ಯಾದ ಮೂಲಕ ಅಫ್ಘಾನಿಸ್ತಾನ ದಾಟಿ ಅವರು ಜರ್ಮನಿಗೆ ತಲುಪಿದ ಅವರು ಹಿಟ್ಲರ್​ನ ಬೇಟಿ ಮಾಡಿದ್ದು ಅದ್ಭುತವೇ ಸರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net