ನೀವು ಸಾಕಷ್ಟು ವಿಟಮಿನ್ ಎ ಪಡೆಯುತ್ತಿಲ್ಲ ಎಂದು ಸೂಚಿಸುವ 5 ಲಕ್ಷಣಗಳು

ರಾತ್ರಿ ಕುರುಡುತನ
ರಾತ್ರಿ ಕುರುಡುತನ
Published on
Night Blindness

ರಾತ್ರಿ ಕುರುಡುತನ

ಕಡಿಮೆ ಬೆಳಕಿನಲ್ಲಿ ಅಥವಾ ರಾತ್ರಿಯ ಸಮಯದಲ್ಲಿ ವಸ್ತುಗಳು ಸರಿಯಾಗಿ ಕಾಣಿಸುವುದಿಲ್ಲ. ಕತ್ತಲೆಯಲ್ಲಿ ಕಣ್ಣುಗಳು ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಡುತ್ತವೆ. ಇದಕ್ಕೆ ಕಾರಣ ವಿಟಮಿನ್ ಎ ಕೊರತೆಯಿಂದ ಕಣ್ಣಿನ ರೆಟಿನಾದಲ್ಲಿರುವ ರೋಡೋಪ್ಸಿನ್ ಎಂಬ ಅಂಶ ಕಡಿಮೆಯಾಗುವುದು.
Dry Skin

ಒಣಗಿದ ಚರ್ಮ

ವಿಟಮಿನ್ ಎ ಚರ್ಮದ ಕೋಶಗಳ ನಿರ್ಮಾಣ ಮತ್ತು ದುರಸ್ತಿಗೆ ಸಹಕಾರಿ. ನಿಮ್ಮ ಚರ್ಮವು ಸದಾ ಒಣಗಿದಂತೆ ಕಾಣುವುದು, ತುರಿಕೆ ಉಂಟಾಗುವುದು ಅಥವಾ ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಏಳುವುದು ಕಂಡುಬರುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಡಿಮೆ ಮಾಡುತ್ತದೆ.
Dry Eyes

ಕಣ್ಣುಗಳು ಒಣಗುವುದು

ಕಣ್ಣುಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ವಿಟಮಿನ್ ಎ ಅಗತ್ಯ. ಕಣ್ಣುಗಳಲ್ಲಿ ಕಣ್ಣೀರು ಉತ್ಪತ್ತಿಯಾಗುವುದು ಕಡಿಮೆಯಾಗಿ, ಕಣ್ಣುಗಳು ಒಣಗಿದಂತಾಗುತ್ತವೆ.ಇದರಿಂದ ಕಣ್ಣುಗಳಲ್ಲಿ ಕಿರಿಕಿರಿ ಅಥವಾ ಉರಿ ಉಂಟಾಗಬಹುದು. ತೀವ್ರವಾದರೆ ಇದು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.
Delayed Wound Healing

ಗಾಯಗಳು ನಿಧಾನವಾಗಿ ವಾಸಿಯಾಗುವುದು

ದೇಹದಲ್ಲಿ ಗಾಯವಾದಾಗ ಅಥವಾ ಶಸ್ತ್ರಚಿಕಿತ್ಸೆಯ ನಂತರ ಚರ್ಮವು ಬೇಗನೆ ಗುಣವಾಗಲು 'ಕೊಲಾಜೆನ್' ಉತ್ಪತ್ತಿಯಾಗಬೇಕು. ವಿಟಮಿನ್ ಎ ಕೊರತೆಯಿದ್ದರೆ, ಚರ್ಮದಲ್ಲಿ ಕೊಲಾಜೆನ್ ಉತ್ಪತ್ತಿ ಕುಂಠಿತಗೊಂಡು ಸಣ್ಣ ಗಾಯಗಳೂ ವಾಸಿಯಾಗಲು ಬಹಳ ದಿನ ತೆಗೆದುಕೊಳ್ಳುತ್ತವೆ.
Frequent Infections

ಪದೇ ಪದೇ ಸೋಂಕು ತಗುಲುವುದು

ವಿಟಮಿನ್ ಎ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ವಿಶೇಷವಾಗಿ ಗಂಟಲು ಅಥವಾ ಎದೆಯ ಭಾಗದಲ್ಲಿ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ನಿಮಗೆ ಪದೇ ಪದೇ ನೆಗಡಿ, ಕೆಮ್ಮು ಅಥವಾ ಶ್ವಾಸಕೋಶದ ಸೋಂಕು ತಗುಲುತ್ತಿದ್ದರೆ, ಅದು ವಿಟಮಿನ್ ಎ ಕೊರತೆಯ ಸಂಕೇತವಾಗಿರಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net