ಖಿನ್ನತೆಯಿಂದ ಬಳಲುವವರು ಹೊಂದಿರುವ 5 ಲಕ್ಷಣಗಳು

ನಿರಂತರ ನಿರಾಸಕ್ತಿ ಮತ್ತು ಬೇಸರ
ನಿರಂತರ ನಿರಾಸಕ್ತಿ ಮತ್ತು ಬೇಸರ
Published on
Constant apathy and boredom

ನಿರಂತರ ನಿರಾಸಕ್ತಿ ಮತ್ತು ಬೇಸರ

ಖಿನ್ನತೆಗೆ ಒಳಗಾದವರು ದೀರ್ಘಕಾಲದವರೆಗೆ ವಿಪರೀತ ಬೇಸರವನ್ನು ಅನುಭವಿಸುತ್ತಾರೆ. ಹಿಂದೆ ಅವರಿಗೆ ಸಂತೋಷ ನೀಡುತ್ತಿದ್ದ ಕೆಲಸಗಳು ಅಥವಾ ಹವ್ಯಾಸಗಳಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ.
Extreme fatigue and lack of energy

ವಿಪರೀತ ಆಯಾಸ ಮತ್ತು ಶಕ್ತಿಯ ಕೊರತೆ

ಯಾವುದೇ ದೈಹಿಕ ಕೆಲಸ ಮಾಡದಿದ್ದರೂ ಸದಾ ಸುಸ್ತಾದಂತೆ ಭಾಸವಾಗುವುದು ಖಿನ್ನತೆಯ ಒಂದು ಮುಖ್ಯ ಲಕ್ಷಣ. ಸಣ್ಣ ಕೆಲಸಗಳನ್ನು ಮಾಡಲು ಕೂಡ ಇವರಿಗೆ ಬೆಟ್ಟ ಹೊತ್ತಷ್ಟು ಭಾರ ಎನಿಸಬಹುದು. ಬೆಳಿಗ್ಗೆ ಎದ್ದ ತಕ್ಷಣವೇ ಉತ್ಸಾಹವಿಲ್ಲದೆ ಇರುವುದು ಇದರ ಲಕ್ಷಣ.
Changes in sleep and appetite

ನಿದ್ರೆ ಮತ್ತು ಹಸಿವಿನಲ್ಲಿ ಬದಲಾವಣೆ

ಖಿನ್ನತೆಯು ವ್ಯಕ್ತಿಯ ನಿದ್ರೆಯ ಕ್ರಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವರಿಗೆ ಅತಿಯಾಗಿ ನಿದ್ರೆ ಬಂದರೆ, ಇನ್ನು ಕೆಲವರಿಗೆ ರಾತ್ರಿಯಿಡೀ ನಿದ್ರೆ ಬಾರದೆ ಒದ್ದಾಡಬಹುದು (Insomnia). ಹಾಗೆಯೇ, ಕೆಲವರು ಅತಿಯಾಗಿ ತಿನ್ನಲು ಪ್ರಾರಂಭಿಸುತ್ತಾರೆ ಅಥವಾ ಹಸಿವನ್ನೇ ಸಂಪೂರ್ಣವಾಗಿ ಕಳೆದುಕೊಳ್ಳಬಹುದು.
Lack of concentration and confusion in decision-making

ಏಕಾಗ್ರತೆಯ ಕೊರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ

ಒಂದು ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರುವುದು, ಓದಿದ್ದು ನೆನಪಿಲ್ಲದಿರುವುದು ಅಥವಾ ಸಣ್ಣ ವಿಷಯಗಳಿಗೂ ನಿರ್ಧಾರ ತೆಗೆದುಕೊಳ್ಳಲು ತಡಕಾಡುವುದು ಖಿನ್ನತೆಯ ಸಂಕೇತಗಳಾಗಿವೆ. ಇವರಲ್ಲಿ ಸದಾ ನಕಾರಾತ್ಮಕ ಆಲೋಚನೆಗಳು ಸುಳಿದಾಡುತ್ತಿರುತ್ತವೆ.
Futility and guilt

ನಿರರ್ಥಕತೆ ಮತ್ತು ಅಪರಾಧಿ ಮನೋಭಾವ

ಯಾವುದೇ ತಪ್ಪು ಮಾಡದಿದ್ದರೂ "ನಾನು ಯಾವುದಕ್ಕೂ ಪ್ರಯೋಜನವಿಲ್ಲ", "ನನ್ನ ಜೀವನ ವ್ಯರ್ಥ" ಅಥವಾ "ಎಲ್ಲದಕ್ಕೂ ನಾನೇ ಕಾರಣ" ಎಂಬ ಆಲೋಚನೆಗಳು ಕಾಡುತ್ತಿರುತ್ತವೆ. ತೀವ್ರ ಸ್ವರೂಪದ ಖಿನ್ನತೆಯಿದ್ದಾಗ ಆತ್ಮಹತ್ಯೆಯಂತಹ ಆಲೋಚನೆಗಳು ಕೂಡ ಬರುವ ಸಾಧ್ಯತೆಯಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net