ನಕಲಿ ಹಾಲನ್ನು ಪತ್ತೆಹಚ್ಚಲು ಮನೆಯಲ್ಲಿ ಮಾಡಬಹುದಾದ 5 ಪರೀಕ್ಷೆಗಳು

ಹಾಲಿನ ಸಾಂದ್ರತೆ ಪರೀಕ್ಷೆ
ಹಾಲಿನ ಸಾಂದ್ರತೆ ಪರೀಕ್ಷೆ
Published on
ಹಾಲಿನ ಸಾಂದ್ರತೆ ಪರೀಕ್ಷೆ

ಹಾಲಿನ ಸಾಂದ್ರತೆ ಪರೀಕ್ಷೆ

ಹಾಲು ಅತಿಯಾಗಿ ತೆಳುವಾಗಿದೆಯೇ ಅಥವಾ ಅದಕ್ಕೆ ನೀರು ಸೇರಿಸಲಾಗಿದೆಯೇ ಎಂದು ತಿಳಿಯಲು ಇದು ಸುಲಭ ದಾರಿ. ಒಂದು ನಯವಾದ ಪ್ಲೇಟ್ ಅಥವಾ ಗೋಡೆಯ ಮೇಲೆ ಒಂದು ಹನಿ ಹಾಲನ್ನು ಹಾಕಿ. ಹಾಲು ನಿಧಾನವಾಗಿ ಕೆಳಗೆ ಹರಿಯುತ್ತಾ ಬಿಳಿ ಗೆರೆಯನ್ನು ಮೂಡಿಸಿದರೆ ಅದು ಅಸಲಿ ಹಾಲು. ಒಂದೊಮ್ಮೆ ಹನಿ ವೇಗವಾಗಿ ಹರಿದು ಯಾವುದೇ ಗುರುತು ಬಿಡದಿದ್ದರೆ ಅದರಲ್ಲಿ ನೀರು ಬೆರೆಸಲಾಗಿದೆ ಎಂದು ಅರ್ಥ.
ಡಿಟರ್ಜೆಂಟ್ ಪರೀಕ್ಷೆ (Detergent Test)

ಡಿಟರ್ಜೆಂಟ್ ಪರೀಕ್ಷೆ (Detergent Test)

ಸಿಂಥೆಟಿಕ್ ಹಾಲನ್ನು ತಯಾರಿಸಲು ಡಿಟರ್ಜೆಂಟ್ ಅಥವಾ ಸೋಪಿನ ಪುಡಿಯನ್ನು ಬಳಸಲಾಗುತ್ತದೆ. ಒಂದು ಗಾಜಿನ ಬಾಟಲಿಯಲ್ಲಿ ಸ್ವಲ್ಪ ಹಾಲು ಮತ್ತು ಅಷ್ಟೇ ಪ್ರಮಾಣದ ನೀರನ್ನು ಹಾಕಿ ಜೋರಾಗಿ ಅಲುಗಾಡಿಸಿ. ಹಾಲು ತುಂಬಾ ನೊರೆ ಬಂದರೆ ಮತ್ತು ಆ ನೊರೆ ದೀರ್ಘಕಾಲದವರೆಗೆ ಹಾಗೆಯೇ ಇದ್ದರೆ, ಅದರಲ್ಲಿ ಡಿಟರ್ಜೆಂಟ್ ಬೆರೆಸಲಾಗಿದೆ ಎಂದರ್ಥ. ಶುದ್ಧ ಹಾಲಿನಲ್ಲಿ ನೊರೆ ಕಡಿಮೆ ಇರುತ್ತದೆ.
ಯೂರಿಯಾ ಪರೀಕ್ಷೆ (Urea Test)

ಯೂರಿಯಾ ಪರೀಕ್ಷೆ (Urea Test)

ಹಾಲನ್ನು ಹೆಚ್ಚು ದಪ್ಪವಾಗಿ ಕಾಣಿಸಲು ಯೂರಿಯಾ ಬೆರೆಸುತ್ತಾರೆ. ಒಂದು ಚಮಚ ಹಾಲನ್ನು ಟೆಸ್ಟ್ ಟ್ಯೂಬ್ ಅಥವಾ ಸಣ್ಣ ಕಪ್‌ಗೆ ಹಾಕಿ ಅದಕ್ಕೆ ಅರ್ಧ ಚಮಚ ತೊಗರಿಬೇಳೆ ಪುಡಿ ಅಥವಾ ಸೋಯಾಬೀನ್ ಪುಡಿಯನ್ನು ಸೇರಿಸಿ. ಐದು ನಿಮಿಷ ಬಿಟ್ಟು ಅದಕ್ಕೆ ಕೆಂಪು ಲಿಟ್ಮಸ್ ಪೇಪರ್ ಅಥವಾ ಅರಿಶಿನ ಪುಡಿಯನ್ನು ಸೇರಿಸಿ. ಹಾಲಿನ ಬಣ್ಣ ನೀಲಿ ಅಥವಾ ಗಾಢ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಯೂರಿಯ
ಸ್ಟಾರ್ಚ್ ಅಥವಾ ಪಿಷ್ಟ ಪರೀಕ್ಷೆ (Starch Test)

ಸ್ಟಾರ್ಚ್ ಅಥವಾ ಪಿಷ್ಟ ಪರೀಕ್ಷೆ (Starch Test)

ಹಾಲು ಮಂದವಾಗಿ ಬರಲು ಸ್ಟಾರ್ಚ್ ಪುಡಿಯನ್ನು ಬಳಸಲಾಗುತ್ತದೆ. ಸ್ವಲ್ಪ ಹಾಲನ್ನು ಕುದಿಸಿ ತಣ್ಣಗಾಗಿಸಿ. ಅದಕ್ಕೆ ಒಂದೆರಡು ಹನಿ ಅಯೋಡಿನ್ ದ್ರಾವಣ ಅಥವಾ ಟಿಂಚರ್ ಅಯೋಡಿನ್ (Tincture Iodine) ಸೇರಿಸಿ. ಹಾಲಿನ ಬಣ್ಣ ತಕ್ಷಣವೇ ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಸ್ಟಾರ್ಚ್ ಬೆರೆಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು.
ರುಚಿ ಮತ್ತು ವಾಸನೆ (Taste and Smell Test)

ರುಚಿ ಮತ್ತು ವಾಸನೆ (Taste and Smell Test)

ರುಚಿ: ಶುದ್ಧ ಹಾಲು ಕುಡಿದಾಗ ನೈಸರ್ಗಿಕವಾಗಿ ಸ್ವಲ್ಪ ಸಿಹಿಯಾಗಿರುತ್ತದೆ. ಆದರೆ ಕಲಬೆರಕೆ ಹಾಲು ಸ್ವಲ್ಪ ಕಹಿ ಅಥವಾ ಸೋಪಿನ ರುಚಿಯನ್ನು ನೀಡುತ್ತದೆ. ವಾಸನೆ: ಸಿಂಥೆಟಿಕ್ ಹಾಲನ್ನು ವಾಸನೆ ನೋಡಿದಾಗ ಅದು ಡಿಟರ್ಜೆಂಟ್ ಅಥವಾ ರಾಸಾಯನಿಕದಂತಹ ಕೆಟ್ಟ ವಾಸನೆಯನ್ನು ಹೊರಹಾಕುತ್ತದೆ. ಶುದ್ಧ ಹಾಲಿಗೆ ಯಾವುದೇ ತೀಕ್ಷ್ಣವಾದ ವಾಸನೆ ಇರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net