126th Mann Ki Baat | ಕರೂರ್​ ದುರಂತದಲ್ಲಿ ಮೃತಪಟ್ಟವರಿಗೆ ಎರಡು ಲಕ್ಷ ಪರಿಹಾರ; ಖಾದಿ ಖರೀದಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ

1. ಕರೂರ್ ರ‍್ಯಾಲಿ ಸಂತ್ರಸ್ತರಿಗೆ ಪರಿಹಾರ
1. ಕರೂರ್ ರ‍್ಯಾಲಿ ಸಂತ್ರಸ್ತರಿಗೆ ಪರಿಹಾರ
Published on
126th Mann Ki Baat

1. ಕರೂರ್ ರ‍್ಯಾಲಿ ಸಂತ್ರಸ್ತರಿಗೆ ಪರಿಹಾರ

ಕರೂರ್ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದ ದುರಂತದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ PMNRF ನಿಂದ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ನೀಡುವ ಭರವಸೆ ನೀಡಿದರು. ಸಂತ್ರಸ್ತ ಕುಟುಂಬಗಳಿಗೆ ತ್ವರಿತ ಪರಿಹಾರ ಮತ್ತು ಬೆಂಬಲ ನೀಡುವಂತೆ ಸೂಚಿಸಿದರು.
126th Mann Ki Baat

2. ಜುಬೀನ್ ಗಾರ್ಗ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಕಳೆದ ವಾರ ನಿಧನರಾದ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಸ್ಮರಿಸಿದ ಮೋದಿ, ಗರ್ಗ್ ಹಾಡುಗಳು ಲಕ್ಷಾಂತರ ಜನರ ಮನಸ್ಸು ಮುಟ್ಟಿದ್ದು, ಅವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಮತ್ತು ಅಸ್ಸಾಂನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತವೆ. ಅಸ್ಸಾಮಿ ಸಂಗೀತವನ್ನು ರಾಷ್ಟ್ರವ್ಯಾಪಿ ಜನಪ್ರಿಯಗೊಳಿಸುವಲ್ಲಿ ಗರ್ಗ್​​ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
126th Mann Ki Baat

ಭಗತ್ ಸಿಂಗ್​​ಗೆ ಗೌರವ

ಕ್ರಾಂತಿಕಾರಿ ಭಗತ್ ಸಿಂಗ್ ಅವರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಗತ್​​​ ಸಿಂಗ್​​​​ ಪ್ರತಿಯೊಬ್ಬ ಭಾರತೀಯರಿಗೆ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿಯ ಮೂಲ ಎಂದು ಕರೆದರು. ನಿರ್ಭಯತೆಯು ಅವರ ಸ್ವಭಾವದಲ್ಲಿ ಬೇರೂರಿತ್ತು. ಅವರನ್ನು ಗಲ್ಲಿಗೇರಿಸುವ ಮೊದಲು, ತಮ್ಮನ್ನು ಮತ್ತು ತಮ್ಮ ಸ್ನೇಹಿತರನ್ನು ಯುದ್ಧ ಕೈದಿಗಳಂತೆ ಪರಿಗಣಿಸಬೇಕೆಂದು ಬಯಸಿದ್ದರು ಎಂದು ಹೇಳಿದರು. ಇದು ಅವರ ಅದಮ್ಯ ಧೈರ್ಯಕ್ಕೆ ಪುರಾವೆಯಾಗಿದೆ ಎಂದರು.
 ಲತಾ ಮಂಗೇಶ್ಕರ್​​ ಬಾಂಧವ್ಯ ನೆನೆದ ಪ್ರಧಾನಿ

ಲತಾ ಮಂಗೇಶ್ಕರ್​​ ಬಾಂಧವ್ಯ ನೆನೆದ ಪ್ರಧಾನಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಜನ್ಮ ದಿನದ ನಿಮಿತ್ತ ಅವರನ್ನೂ ನೆನಪಿಸಿಕೊಂಡ ಪ್ರಧಾನಿ, ಭಾರತೀಯ ಸಂಸ್ಕೃತಿ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿರುವ ಯಾರಾದರೂ ಮಂಗೇಶ್ಕರ್​​ ಹಾಡುಗಳಿಗೆ ತಲೆದೂಗಲೇ ಬೇಕು, ಅವರು ದೇಶಭಕ್ತಿ ಗೀತೆಗಳು ಅಸಂಖ್ಯಾತ ಜನರನ್ನು ಪ್ರೇರೇಪಿಸಿವೆ ಎಂದರು. ಇದೇ ವೇಳೆ ತಮ್ಮ ಜೊತೆಗಿನ ವೈಯಕ್ತಿಕ ಬಾಂಧವ್ಯ ಮತ್ತು ರಕ್ಷಾ ಬಂಧನವನ್ನು ಸಹ ನೆನಪಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net