ಹಿಂದಿ ಚಿತ್ರಗಳ ವೈಫಲ್ಯ; ಮೌನ ಮುರಿದ ಸಲ್ಮಾನ್​ ಖಾನ್ ಹೇಳಿದ್ದಿಷ್ಟು

Salman Khan
Published on

ಮುಂಬೈ: ಸೌತ್​ ಸಿನಿ ಇಂಡಸ್ಟ್ರಿಯ ಸಿನಿಮಾಗಳ ಎದುರು ಸಸತ ವೈಫಲ್ಯ ಕಂಡು ನಲುಗಿದ್ದ ಬಾಲಿವುಡ್​ಗೆ ಶಾರುಖ್​ ಖಾನ್​ ನಟನೆಯ ಪಠಾಣ್​ ಚಿತ್ರವು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಬಾಲಿವುಡ್​ ಚಿತ್ರಗಳ ಸತತ ವೈಫಲ್ಯ ಕುರಿತು ಮೌನ ಮುರಿದಿರುವ ಸಲ್ಮಾನ್​ ಖಾನ್​ ಇದನ್ನು ನಾನು ಬಹಳ ಹಿಂದಿನಿಂದ ಹೇಳುತ್ತಿದ್ದೇನೆ ಗಲತ್​ ಪಿಚ್ಚರ್​ ಬನಾವೋಗೆ ತೋ ಕೈಸಾ ಚಲೇಗಾ. ನಾನು ಹೊಸ ಹೊಸ ನಿರ್ಧೇಶಕರು ಹಾಗೂ ನಿರ್ಮಾಪಕರನ್ನು ಭೇಟಿ ಮಾಡಿದ್ದೇನೆ ಅವರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದನ್ನು ನಾನು ನೋಡಿಲ್ಲ.

ಕೆಲವರು ಚಿತ್ರ ಮಾಡಬೇಕಾದರೆ ಮುಘಲ್​-ಇ-ಆಜಾಮ್​ ಅಥವಾ ಹಮ್​ ಆಪ್​ ಕೇ ಕೌನ್​ ಮಾಡುತ್ತಿರುವುದಾಗಿ ಭಾವಿಸುತ್ತಾರೆ. ಆದರೆ, ನಿಜವಾಗಿಯೂ ಅದು ಆಗುತ್ತಿಲ್ಲ. ಇದರ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕಿದೆ ಎಂದು ಹೇಳಿದ್ದಾರೆ.

ಸಲ್ಮಾನ್​ ಖಾನ್​ ನಟನೆಯ ಕಿಸೀ ಕಾ ಭಾಯ್​ ಕಿಸೀ ಕಿ ಜಾನ್​ ಚಿತ್ರವು ರಂಜಾನ್​ ಹಬ್ಬದ ಪ್ರಯುಕ್ತ ಏಪ್ರಿಲ್​ 21 ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net