ನವೆಂಬರ್​ನಲ್ಲಿ ಈ ರಾಶಿಯವರಿಗೆ ಗಜಕೇಸರಿ ರಾಜ್ಯಯೋಗ! Astrology

Astrology
Published on

Astrology: ನವೆಂಬರ್​ ತಿಂಗಳು ಈಗಾಗಲೇ ಪ್ರಾರಂಭವಾಗಿದೆ. ಈ ವಾರದಲ್ಲಿ ಶುಕ್ರನು ರಾಶಿಗಳಲ್ಲಿ ಸಂಚಾರ ನಡೆಸುವುದರಿಂದ ಗಜಕೇಸರಿ ರಾಜ್ಯಯೋಗವು ಬಲವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಗಜಕೇಸರಿ ಯೋಗವು ಬಹಳ ಪ್ರಭಾವ ಶಾಲಿ ಎಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೃತ್ತಿ ಮಾಡುವಂತಹವರ ಯಶಸ್ಸು ಬದಲಾಗುತ್ತದೆ. ಹಾಗಿದ್ದರೆ, ಗಜಕೇಸರಿ ರಾಜ್ಯಯೋಗದಿಂದ ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಎಂದು ನೋಡೋಣ ಬನ್ನಿ...

1. ವೃಷಭ

ವೃಷಭ ರಾಶಿಯವರಿಗೆ ಈ ವಾರ ಕಚೇರಿ ಕೆಲಸಗಳಲ್ಲಿ ಬಹಳ ಉತ್ಸಾಹವಿರುತ್ತದೆ. ಇವರು ಕೆಲಸದಲ್ಲಿ ಅಪೇಕ್ಷಿತ ಯಶಸ್ಸನ್ನು ಸಾಧಿಸಬಹುದು. ಹಾಗೆಯೇ, ವಾರದ ಮಧ್ಯದಲ್ಲಿ ಕೌಂಟುಂಬಿಕ ಸಮಸ್ಯೆಗಳನ್ನು ಅನುಭವಿಸಬಹುದು. ಇದು ನಿಮ್ಮ ಸುಖ ಜೀವನಕ್ಕೆ ಉತ್ತಮ ಸಮಯವಾಗಿರುತ್ತದೆ. ಯಾರಾದರೂ, ನಿಮ್ಮ ಸಂಗಾತಿಯನ್ನು ಕುಟುಂಬಕ್ಕೆ ಪರಿಚಯಿಸುವವರಿದ್ದರೆ, ಅವರು ಸಂಗಾತಿಯನ್ನು ಪರಿಚಯಿಸಬಹುದು. ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವ ಸಾಧ್ಯತೆ ಅಧಿಕವಾಗಿ ಇದೆ. ನಿಮ್ಮ ಕೆಲಸದ ಮೇಲೆ ಜಾಗೃತವಾಗಿರಿ ಮತ್ತು ನಕಾರಾತ್ಮಕ ಜನರನ್ನು ನಿರ್ಲಕ್ಷಿಸಿ. ಈ ಸಮಯ ನಿಮ್ಮದಾಗಿದೆ.

2. ಕರ್ಕಾಟಕ

ಕರ್ಕಾಟಕ ರಾಶಿಯವರಿಗೆ ಈ ವಾರ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ಸಹಾಯವಾಗುವಂತಹ ದಿನವಾಗಿದೆ. ಈ ಸಮಯದಲ್ಲಿ ನಿಮ್ಮ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ನಿಮ್ಮ ಪರಿಶ್ರಮಕ್ಕೆ ಬೆಂಬಲಾಗಿ ನಿಲ್ಲುತ್ತಾರೆ. ಈ ವಾರದ ದ್ವಿತೀಯಾರ್ಧವು ಮೊದಲಾರ್ಧಕ್ಕಿಂತ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ತೆಗೆದುಕೊಳ್ಳುವಂತಹ ನಿರ್ಧಾರವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ನೀವು ಕೆಲಸದ ಬಗ್ಗೆ ತುಂಬಾ ಉತ್ಸಾಹವಾಗಿರುತ್ತೀರಿ. ನಿಮ್ಮ ಧೈರ್ಯವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ.

3. ಧನು ರಾಶಿ

ಧನು ರಾಶಿಯವರಿಗೆ ಈ ವಾರ ಶುಭ ಮತ್ತು ಅದೃಷ್ಟ ಎರಡೂ ಸಿಗಲಿದೆ. ಈ ವಾರ ನಿಮ್ಮ ಎಲ್ಲಾ ಯೋಜಿತ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮಗೆ ಶುಭ ಸುದ್ದಿ ಸಿಗಲಿದೆ. ಈ ಹಿಂದೆ ಮಾಡಿದಂತಹ ಹೂಡಿಕೆಗಳು ನಿಮಗೆ ಲಾಭವನ್ನು ತರುತ್ತವೆ. ನಿಮ್ಮ ಹಿತೈಷಿಗಳ ಸಹಾಯ ಪಡೆದು ಅವರೊಂದಿಗೆ ಮಾತನಾಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಒಳ್ಳೆಯ ಸುದ್ದಿಯನ್ನು ಪಡೆಯುತ್ತಾರೆ. ಯಾರೋಂದಿಗಾದರೂ ಪ್ರೀತಿಯನ್ನು ವ್ಯಕ್ತಪಡಿಸಲು ಯೋಚಿಸುತ್ತಿದ್ದರೆ, ನೀವು ಅದನ್ನು ಮಾಡಬಹುದು. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net