ತರಕಾರಿ ಪೆಟ್ಟಿಗೆ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯನ್ನು ಕೊಂದ ರೋಬೋಟ್!

machine
Published on

ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದಲ್ಲಿ ರೋಬೋಟ್‌ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿರುವ ಸುದ್ದಿ ವರದಿಯಾಗಿದೆ. Yonhap ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಯಂತ್ರವು ತಾನು ನಿರ್ವಹಿಸುತ್ತಿದ್ದ ತರಕಾರಿಗಳ ಪೆಟ್ಟಿಗೆಗಳಿಂದ ಮನುಷ್ಯನನ್ನು ಪ್ರತ್ಯೇಕಿಸಲು ವಿಫಲವಾದ ನಂತರ ಈ ಘಟನೆ ಸಂಭವಿಸಿದೆ.

ಆ ವ್ಯಕ್ತಿಗೆ ಸುಮಾರು 40 ವರ್ಷವಾಗಿದ್ದು, ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ ಕೃಷಿ ಉತ್ಪನ್ನಗಳ ವಿತರಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ರೊಬೊಟಿಕ್ಸ್ ಕಂಪನಿಯ ಕೆಲಸಗಾರ ಎಂದು ಗುರುತಿಸಲಾಗಿದೆ. ಈ ಕೈಗಾರಿಕಾ ರೋಬೋಟ್ ಕ್ಯಾಪ್ಸಿಕಂ ತುಂಬಿದ ಪೆಟ್ಟಿಗೆಗಳನ್ನು ಎತ್ತಿಕೊಂಡು ಪ್ಯಾಲೆಟ್ ಮೇಲೆ ಇಡುತ್ತಿತ್ತು.

ರೋಬೋಟ್​​​​ಗೆ ಬಾಕ್ಸ್‌ಗಳನ್ನು ಹ್ಯಾಂಡಲ್ ಮಾಡಲು ಪ್ರೋಗ್ರಾಮ್ ಮಾಡಲಾಗಿತ್ತು. ಬಹುಶಃ ರೋಬೋಟ್ ಆ ಸಮಯದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ವ್ಯಕ್ತಿಯನ್ನು ತರಕಾರಿ ಪೆಟ್ಟಿಗೆ ಎಂದು ಗುರುತಿಸಿದೆ. ಅದು ವ್ಯಕ್ತಿಯನ್ನು ತರಕಾರಿಗಳ ಬಾಕ್ಸ್ ಎಂದು ತಪ್ಪಾಗಿ ಗ್ರಹಿಸಿ ಅವನನ್ನು ಕನ್ವೇಯರ್ ಬೆಲ್ಟ್‌ನಿಂದ ಹಿಡಿದಿದೆ. ಮೊದಲಿಗೆ ರೋಬೋಟ್ ತೋಳು ಮನುಷ್ಯನ ಮೇಲ್ಭಾಗವನ್ನು ಕನ್ವೇಯರ್ ಬೆಲ್ಟ್‌ನಿಂದ ಕೆಳಕ್ಕೆ ತಳ್ಳಿ, ಅವನ ಮುಖ ಮತ್ತು ಎದೆಯನ್ನು ಪುಡಿಮಾಡಿದೆ.

ಈ ಸಾರ್ಟಿಂಗ್ ಪ್ಲಾಂಟ್‌ನಲ್ಲಿ ಪರೀಕ್ಷಿಸುವ ಮೊದಲು ವ್ಯಕ್ತಿಯು ಈ ರೋಬೋಟ್‌ನ ಸಂವೇದಕಗಳನ್ನು ಪರಿಶೀಲಿಸುತ್ತಿದ್ದರು. ರೋಬೋಟ್‌ನ ಸಂವೇದಕಗಳಲ್ಲಿನ ಸಮಸ್ಯೆಗಳನ್ನು ತನಿಖೆ ಮಾಡಲು ಈ ವ್ಯಕ್ತಿಯನ್ನು ಕರೆಸಲಾಗಿತ್ತು ಎನ್ನಲಾಗಿದೆ.

ಅಂತಿಮವಾಗಿ ರೋಬೋದಿಂದ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನಂತರ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. ಈ ವರ್ಷ ದಕ್ಷಿಣ ಕೊರಿಯಾದಲ್ಲಿ ಬೆಳಕಿಗೆ ಬಂದ ಎರಡನೇ ಪ್ರಕರಣ ಇದಾಗಿದೆ. ಮಾರ್ಚ್‌ನಲ್ಲಿ, 50 ವರ್ಷದ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುವಾಗ ರೋಬೋಟ್‌ನಿಂದ ಮುಗ್ಗರಿಸಿ ಗಂಭೀರ ಗಾಯಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net