More

    ಮೂರನೇ ದಿನಕ್ಕೆ ಪಠಾಣ್, ಬಾಹುಬಲಿ ದಾಖಲೆ ಮುರಿದ ‘ಗದರ್ 2’

    ಮುಂಬೈ: ಬಾಲಿವುಡ್ ಸ್ಟಾರ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮೀಶಾ ಪಟೇಲ್ ನಟನೆಯ ಚಿತ್ರ ಗದರ್ 2 ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ತೆರೆಕಂಡ ಈ ಚಿತ್ರ ಇದೀಗ ದಾಖಲೆ ಬರೆದಿದೆ. ಗದರ್ 2 ಆರಂಭಿಕ ವಾರಾಂತ್ಯವೂ ಅದ್ಭುತವಾಗಿದೆ. ಇದು ಪಠಾಣ್ ಮತ್ತು ಬಾಹುಬಲಿ ದಾಖಲೆಗಳನ್ನೂ ಬ್ರೇಕ್ ಮಾಡಿದೆ.

    ಅನಿಲ್ ಶರ್ಮಾ ಅವರು ನಿರ್ದೇಶಿಸಿದ ಗದರ್ ಏಕ್ ಪ್ರೇಮ್ ಕಥಾ 2001 ರಲ್ಲಿ ಬಂದಿತು. ಈ ಚಿತ್ರ ಬಂದು 22 ವರ್ಷಗಳ ನಂತರ, ಅದರ ಮುಂದುವರಿದ ಭಾಗವಾದ ಗದರ್ 2 ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಚಿತ್ರವು 135 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 100 ಕೋಟಿ ರೂ.ಕ್ಲಬ್‌ಗೆ ಪ್ರವೇಶಿಸಿದೆ. Sacnilk.com ಪ್ರಕಾರ , ಚಿತ್ರವು ಬಿಡುಗಡೆಯಾದ ಮೂರು ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ.ಗೂ ಹೆಚ್ಚು ಹಣವನ್ನು ಗಳಿಸಿದೆ.

    ಗದರ್ 2 ಬಾಕ್ಸ್ ಆಫೀಸ್ ಕಲೆಕ್ಷನ್
    ವರದಿಯ ಪ್ರಕಾರ, ಬಿಡುಗಡೆಯಾದ ಮೂರನೇ ದಿನದಲ್ಲಿ ಗದರ್ 2 ಭಾರತದಲ್ಲಿ 52 ಕೋಟಿ ರೂ.ಗಳಿಸಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರ ಮೊದಲ ದಿನ 40.1 ಕೋಟಿ ರೂ. ಮತ್ತು ಎರಡನೇ ದಿನ 43.08 ರೂ.ಕೋಟಿ ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಕಲೆಕ್ಷನ್ ಪ್ರಸ್ತುತ 135.18 ಕೋಟಿ ರೂ.ಆಗಿದೆ.

    ಮೂರನೇ ದಿನದ ಗಳಿಕೆಯಲ್ಲಿ ಈ ಚಿತ್ರವು ಪಠಾಣ್ ಮತ್ತು ಬಾಹುಬಲಿ ದಾಖಲೆಗಳನ್ನು ಮುರಿದಿದೆ. ಪಠಾಣ್ ಮೂರನೇ ದಿನ 39 ಕೋಟಿ ಗಳಿಸಿತ್ತು. ಬಾಹುಬಲಿ ಮೂರನೇ ದಿನ 46.5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು.

    ಭಾರಿ ಪ್ರತಿಕ್ರಿಯೆ ಪಡೆದ ‘ಹರ್ ಘರ್ ತಿರಂಗ’; ತ್ರಿವರ್ಣ ಧ್ವಜದೊಂದಿಗೆ 6 ಕೋಟಿಗೂ ಹೆಚ್ಚು ಸೆಲ್ಫಿಗಳನ್ನು ಅಪ್‌ಲೋಡ್ ಮಾಡಿದ ಭಾರತೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts