

ಮುಂಬೈ: ನಟ, ಸಂಸದ ಸನ್ನಿ ಡಿಯೋಲ್-ಅಮೀಶಾ ಪಟೇಲ್ ಅಭಿನಯದ ಗದರ್-2 ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಸಿನಿಮಾದ ಅಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆ ಕಂಡು ಬಂದಿಲ್ಲ.
ವಾರದ ದಿನವೂ ಸಿನಿಮಾದ ಗಳಿಕೆಯೂ 35 ಕೋಟಿ ರೂಪಾಯಿಗಿಂತ ಕೆಳಗೆ ಇಳಿದಿಲ್ಲ. ಬಿಡುಗಡೆಯಾದ ಆರು ದಿನಗಳಲ್ಲಿ ಚಿತ್ರವೂ 261.35 ಕೋಟಿ ರೂಪಾಯಿ ಗಳಿಸಿರುವುದು ಮತ್ತಷ್ಟು ವಿಶೇಷವಾಗಿದೆ. ಬಾಕ್ಸ್ಆಫೀಸ್ ಪಂಡಿತರು ಸಿನಿಮಾವನ್ನು ತೂಫಾನ್, ಸುನಾಮಿ, ಹರಿಕೇನ್ ಎಂದೆಲ್ಲಾ ಬಣ್ಣಿಸಿದ್ದಾರೆ.
ಆಗಸ್ಟ್ 15ರಂದು ಚಿತ್ರವು 200 ಕೋಟಿ ರೂಪಾಯಿ ಕ್ಲಬ್ ಸೇರಿದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಆಗಸ್ಟ್ 16ರಂದು ಚಿತ್ರವು 34.50 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ವಾರದ ದಿನ ಇಷ್ಟು ದೊಡ್ಡಮಟ್ಟದಲ್ಲಿ ಗಳಿಕೆ ಮಾಡೋದು ಸಣ್ಣ ಸಾಧನೆಯೇನೂ ಅಲ್ಲ ಎಂದು ಬಾಕ್ಸ್ಆಫೀಸ್ ಪಂಡಿತರು ಹೇಳಿದ್ದಾರೆ.
ಸದ್ಯ ಸನ್ನಿ ಡಿಯೋಲ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ KGF Chapter-2 ದಾಖಲೆ ಮೇಲೆ ಕಣ್ಣಿಟ್ಟಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದ ಅಬ್ಬರ ಹೀಗೇ ಮುಂದುವರಿದರೆ ಮತ್ತಷ್ಟು ದಾಖಲೆಗಳು ಸೃಷ್ಟಿ ಆಗುವುದಂತು ಗ್ಯಾರಂಟಿ.
ರಾಕಿಂಗ್ ಸ್ಟಾರ್ ಯಶ್ ನಟನೆಯ KGF Chapter-2 ಚಿತ್ರವೂ ಬಾಲಿವುಡ್ನಲ್ಲಿ 434 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಗಳಿಕೆಯನ್ನು ಸನ್ನಿ ಡಿಯೋಲ್ ನಟನೆಯ ಗದರ್-2 ಚಿತ್ರವೂ ಮುರಿದು ಹಾಕಲಿದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರವು 543 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ದಾಖಲೆ ಮುರಿಯುವುದು ಡೌಟ್ ಎಂದು ಅಂದಾಜಿಲಸಾಗಿದೆ.