ನೀರು ನೈರ್ಮಲ್ಯ ಕಾರ್ಯ ನಿರ್ವಹಣೆಯ ಪರಿಶೀಲನೆ ಜವಾಬ್ದಾರಿ ಅತ್ಯವಶ್ಯ

30GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್​ ಪಾತ್ರ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸುಧಾರಿತ ಮಟ್ಟದ ಸ್ವಚ್ಛತೆ ಕ್ರಮ ವಹಿಸಬೇಕು ಎಂದು ಜಿಪಂ ಸಿಇಓ ಭರತ್​ ಎಸ್​ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಅಡಿದ ಅವರು, ಜಿಲ್ಲೆಯಲ್ಲಿನ ಗ್ರಾಮಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡುವುದು, ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಮಟ್ಟದ ಸ್ವಚ್ಛತೆ ಖಚಿತಪಡಿಸುವುದು, ಕುಡಿಯುವ ನೀರಿನ ಮೂಲಗಳ ಸುಸ್ಥಿರತೆಯ ಕಾಮಗಾರಿಗಳು ಮತ್ತು ಬೂದು ನೀರು ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಜವಾಬ್ದಾರಿಗಳನ್ನು ಮಿಷನ್​ ಹೊಂದಿದೆ. ಕಾರ್ಯಕ್ರಮದ ಅನುಷ್ಟಾನಿತ ಅಧಿಕಾರಿಗಳು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದರು.

ಪ್ಲಾಸ್ಟಿಕ್​ ತ್ಯಾಜ್ಯ ನಿರ್ವಹಣಾ ಟಕಗಳು, ಸ್ವಚ್ಛ ಸಂಕೀರ್ಣ ಟಕ, ತ್ಯಾಜ್ಯ ಸಂಗ್ರಹಣೆ ವಾಹನಗಳು, ದ್ರವ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಮಲ ತ್ಯಾಜ್ಯ ನಿರ್ವಹಣೆ, ಗೋರ್ಬದನ್​ ಟಕಗಳ ಕ್ರಿಯಾತ್ಮಕತೆ, ಕಾರ್ಯಾಚರಣೆ ಮತ್ತು ಸುಸ್ಥಿರತೆಯ ಮೇಲ್ವಿಚಾರಣೆ, ಪ್ರತಿ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಖಚಿತಪಡಿಕೊಳ್ಳುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಗ್ರಾಮೀಣ ನೀರು ಸರಬರಾಜು ಕಾರ್ಯ ನಿರ್ವಾಹಕ ಅಭಿಯಂತರ ರಾವೇಂದ್ರ ಹೊಸಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್​. ಎಸ್​.ನೀಲಗುಂದ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಸನಗೌಡ್ರ ಕೊಟ್ಟೂರ, ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರ, ಜಿಪಂ ಯೋಜನಾ ನಿರ್ದೇಶಕ ಚಳಗೇರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net