

ವಿಜಯವಾಣಿ ಸುದ್ದಿಜಾಲ ಗದಗ
ನಿರಂತರ ಪುಸ್ತಕ ಓದುವುದರಿಂದ ವಿದ್ಯಾಥಿರ್ ಜೀವನ ಯಶಸ್ಸಿನ ದಾರಿಯಲ್ಲಿ ಸಾಗುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಅತಿಯಾದ ಮೊಬೈಲ್ ರ್ದುಬಳಕೆಯಿಂದ ಬದುಕು ಬೀದಿಗೆ ಬೀಳುವುದು ನಿಶ್ಚಿತ. ಇದನ್ನರಿತು ವಿದ್ಯಾಥಿರ್ಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಇಂದು ಅತ್ಯವಶ್ಯವಿದೆ ಎಂದು ಹಿರಿಯ ಶಿಕ ಎಂ. ಐ. ಶಿವನಗೌಡ್ರ ಹೇಳಿದರು.
ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುಸ್ತಕದ ಮಹತ್ವ ಹಾಗೂ ಮೊಬೈಲ್ ಬಳಕೆ ಮತ್ತು ರ್ದುಬಳಕೆಯ ಬಗ್ಗೆ ಹೊರತಂದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕದೊಂದಿಗೆ ನಿರಂತರ ತಮ್ಮ ಸ್ನೇಹ ಇರಬೇಕು. ಓದುವ ಹವ್ಯಾಸ ರೂಢಿಮಾಡಿಕೊಳ್ಳಬೇಖು. ತಲೆ ತಗ್ಗಿಸಿ ಪುಸ್ತಕವನ್ನು ನೋಡಿದರೆ ಸದಾ ತಲೆ ಎತ್ತುವಂತೆ ಮಾಡುತ್ತದೆ. ಆದರೆ, ತಲೆ ತಗ್ಗಿಸಿ ಮೊಬೈಲ್ ನೋಡುತ್ತ ಕುಳಿತರೆ ಬವಿಷ್ಯದಲ್ಲಿ ತಲೆ ಎತ್ತದಂತೆ ಮಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಮೊಬೈಲ್ ಬದಿಗೀಟ್ಟು ಪುಸ್ತಕವನ್ನು ಗೆಳೆಯನಾಗಿ ಸ್ವೀಕರಿಸಿ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯ ಜಯಲಕ್ಷಿ$್ಮ ಅಣ್ಣಿಗೇರಿ ಮಾತನಾಡಿ, ವಿದ್ಯಾಥಿರ್ ಜೀವನ ಸುವರ್ಣಕಾಲ. ಇದರ ಸದುಪಯೋಗವನ್ನು ಪಡೆದುಕೊಂಡು ಬಂಗಾರದಂತಹ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾಥಿರ್ ಬದುಕು ಅತ್ಯಂತ ಮಹತ್ವದ ಕಾಲಟ್ಟ. ಈ ಶಾಲೆಯಲ್ಲಿ ನಿಮಗೆ ಎಲ್ಲ ಶೈಣಿಕ ಪರಿಸರ ವಾತಾವರಣನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು. ಕರಪತ್ರಗಳು ತಮ್ಮ ಬದುಕಿನ ಪಥವನ್ನು ಬದಲಿಸಲಿ ಎಂದು ಹೇಳಿದರು.
ಶಂಕ್ರಮ್ಮ ಹಣಮಗೌಡ್ರು, ಮಂಜುಳಾ ಸಾಮ್ರಾಣಿ, ಸುಮಂಗಲ ಪತ್ತಾರ, ಶಾರದಾ ಬಾಣದ, ಶೋಭಾ ಗಾಳಿ, ರಮೇಶ್ ಬಸರಿ, ಸಾವಿತ್ರಿ ಗದ್ದನಕೇರಿ, ಎನ್. ಆರ್. ಶಿರೋಳ, ಸಬಿಯಾ ಕುಷ್ಟಗಿ, ಗಂಗಾ ಅಳವಂಡಿ, ಮಂಜುಳಾ ಟಿ, ಶಶಿಕಲಾ ಗುಳೇದವರ, ಪದ್ಮಾ ದಾಸರ, ಲಕ್ಷ$್ಮಮ್ಮ ಮಾಳೋತ್ತರ, ಶಾರದಾ ಬಾಣದ, ಸಂಜೀವಿನಿ ಕೂಲಗುಡಿ ಇತರರು ಇದ್ದರು.