

ಗದಗ: ಮಹಾತ್ಮ ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹದ ಅಸ್ತ್ರದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಬಣ್ಣಿಸಿದರು. .
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ 156 ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ – 121ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ಇಂಗ್ಲೆAಡಿನಲ್ಲಿ ಕಾನೂನು ಅಧ್ಯಯನ ಮಾಡಿ ನಂತರ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿಯಲ್ಲಿದ್ದಾಗ ಸವರ್ಣೀಯರ ದಬ್ಬಾಳಿಕೆ ಹಾಗೂ ಅಸ್ಪಶ್ಯತೆಯನ್ನು ಕಂಡು ಮರುಗಿದರು. ಭಾರತೀಯ ರಾಷ್ಟ್ರೀಯ ಕಾಂಗೆಸ್‌ನ ನಾಯಕತ್ವ ವಹಿಸಿದ ಬಳಿಕೆ ಬಡತನ ನಿವಾರಣೆ, ಅಸ್ಪçಶ್ಯತೆ ವಿರುದ್ದ ಹೋರಾಡಿದರು. ತಮ್ಮ ದೇಶದಲ್ಲಿಯೇ ಇರುವ ಸಾಮಾಜಿಕ ಸಮಸ್ಯೆಗಳಾದ ಅಸ್ಪಶ್ಯತೆ ಹಾಗೂ ಪರಕೀಯರ ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಿದರು. ಸತ್ಯ ಮತ್ತು ಸರಳತೆ ಇವರ ವಿಶೇಷತೆಗಳಾಗಿದ್ದವು ಎಂದರು.
ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಟ ನಡೆಸಿದ ಅವರು ದೇಶಗಳಲ್ಲಿನ ಬಹಳಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನೂ ಸಹ ಮಾತುಕತೆಯಿಂದ ಬಗೆಹರಿಸಬಹುದಾಗಿದೆ ಎಂದು ಸಮಾಜಕ್ಕೆ ತಿಳಿಸಿದ ಮಹಾತ್ಮ ಗಾಂಧಿಜಿಯವರು ಎಂದರು.
ಲಾಲ್‌ಬಹದೂರ್ ಶಾಸ್ತಿçಯವರು ಭಾರತ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕ ನಂತರ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬರಗಾಲವಿದ್ದ ಕಾರಣದಿಂದ ದೇಶದ ಜನತೆ ಆಹಾರದ ಕೊರತೆ ಅನುಭವಿಸುತ್ತಿರುವುದರಿಂದ ವಾರದಲ್ಲಿ ಒಂದು ದಿವಸ ದೇಶದ ಜನರೆಲ್ಲರೂ ಉಪವಾಸ ಮಾಡಬೇಕು ಹಾಗೂ ಸ್ವತ: ಲಾಲ್ ಬಹದ್ದೂರ ಶಾಸ್ತಿçÃಜಿಯವರು ಕೂಡ ಉಪವಾಸ ಕೈಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊAಡರು ಎಂದು ವಿವರವಾಗಿ ಜಿಲ್ಲಾಧಿಕಾರಿ ತಿಳಿಸಿಕೊಟ್ಟರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಸನ್ಮಾನ : ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಕು. ಸೌಮ್ಯ ದೇವೆಂದ್ರಪ್ಪ ಮೆಣಸಿನಕಾಯಿ- ಪ್ರಥಮ , ಕು.ಸಮೀಕ್ಷಾ ಬ ಮೇಗಳಮನಿ- ದ್ವಿತೀಯ, ಕು. ಸೌಮ್ಯ ಶ ಜಗ್ಗಲ- ತೃತೀಯ. ಪದವಿ ಪೂರ್ವ ವಿಭಾಗದಲ್ಲಿ ಕು. ಐಶ್ವರ್ಯ ಎಂ. ತಮ್ಮಣ್ಣವರ ಪ್ರಥಮ, ಸಾಹಿಲ್ - ದ್ವಿತೀಯ , ಕು. ಅಕ್ಷತಾ ಮಲ್ಲಪ್ಪ ಹೂಗಾರ – ತೃತೀಯ. ಪದವಿ/ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಹನಾ ಹೆಬಸೂರ -ಪ್ರಥಮ, ಕೃಷ್ಣಾ ದೂರಪ್ಪನವರ- ದ್ವಿತೀಯ , ಕೀರ್ತಿ ಸಿ ಮಾನ್ವಿ – ತೃತೀಯ , ಸುಮಿತ್ರಾ ನಾ ಗವಾರಿ – ಚತುರ್ಥ.
ಸಮೀಕ್ಷಾದಾರರಿಗೆ ಸನ್ಮಾನ : ರಾಜ್ಯದಲ್ಲಿ ಜರುಗುತ್ತಿರಯವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಗದಗ ತಾಲೂಕಿನ ಶಿಕ್ಷಕ/ ಶಿಕ್ಷಕಿಯರಾದ ಶ್ರೀಮತಿ ಮಲ್ಲಮ್ಮ ಹೂಗಾರ, ಶ್ರೀಮತಿ ಕಾಶಿಬಾಯಿ ಮದಿ, ಎಚ್.ಡಿ.ಕುರಿ, ಪ್ರದೀಪ ಚಿತ್ತರಗಿ, ಜಯಕುಮಾರ್, ಶ್ರಿಮತಿ ರಂಗಪ್ಪನವರ, ಹುಸೇನಬಾದಶಾಹ ಮಂಗಳೂರ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾದಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ನಗರಾಭಿವೃದ್ಧಿ ಪ್ರಾದಿಕಾರದ ಸದಸ್ಯ ಬಸವರಾಜ ಕಡೆಮನಿ, ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ.ಬಸವರಾಜ ಬಳ್ಳಾರಿ, ಎಂ.ಜಿ.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಬಾರಂಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ್ರ ಕೋಟೂರ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.
ಕಲಾವಿದ ಡಾ. ವೆಂಕಟೇಶ ಅಲ್ಕೋಡ ಅವರು ಮಹಾತ್ಮ ಗಾಂಧೀಜಿಯವರ ಪ್ರಿಯ ಭಜನೆ ಗೀತೆಗಳನ್ನು ಪ್ರಸ್ತುತಪಡಿಸಿದರು. ನಾಡಗೀತೆಯೊಂದಿಗೆ ಪ್ರ‍್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.