More

    ಜಾನಕಿಯ ಕೈಹಿಡಿದ ಹೀರೋ; ಮೊದಲ ಆಕರ್ಷಣೆಯತ್ತ ಗಾನವಿ

    ಬೆಂಗಳೂರು: ‘ಧಾರಾವಾಹಿಗಿಂತ ಸಿನಿಮಾನೇ ನನ್ನ ಮೊದಲ ಆಕರ್ಷಣೆ. ಸಿನಿಮಾದಿಂದಲೇ ಕರಿಯರ್ ಆರಂಭಿಸಬೇಕು ಎಂದುಕೊಂಡಿದ್ದೆ. ಆದರೆ, ‘ಮಗಳು ಜಾನಕಿ’ ಧಾರಾವಾಹಿ ಮೂಲಕ ಆರಂಭವಾಯಿತು. ಇದೀಗ ಸಿನಿಮಾ ಕಡೆಗಷ್ಟೇ ನನ್ನ ಒಲವು ಮತ್ತು ಎಲ್ಲವೂ …’ ಹೀಗೆ ಮುಂದಿನ ಗುರಿಯ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡುತ್ತಾರೆ ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ.

    ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ‘ಮಗಳು ಜಾನಕಿ’ ಧಾರಾವಾಹಿಯ ಪ್ರಸಾರ ಕಳೆದ ಕೆಲವು ತಿಂಗಳುಗಳ ಹಿಂದೆ ನಿಲ್ಲುತ್ತಿದ್ದಂತೆ, ಗಾನವಿ ಕೈ ಹಿಡಿದಿದ್ದು ‘ಹೀರೋ’. ಅಂದರೆ, ರಿಷಬ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರಕ್ಕೆ ಗಾನವಿ ನಾಯಕಿಯಾಗಿ ಆಯ್ಕೆಯಾದರು. ಅಲ್ಲಿಂದ ಮತ್ತೊಂದು ಹಳಿ ಮೇಲಿನ ಅವರ ಪ್ರಯಾಣ ಶುರುವಾಯಿತು. ‘ಆರಂಭದಿಂದ ಸಿನಿಮಾ ಕ್ಷೇತ್ರವೇ ನನ್ನ ಮೊದಲ ಆಯ್ಕೆಯಾಗಿತ್ತು. ಹೀಗಿರುವಾಗಲೇ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದರಿಂದ ಕಿರುತೆರೆಗೆ ಎಂಟ್ರಿ ಕೊಟ್ಟೆ. ಇದೀಗ ಮತ್ತೆ ನನ್ನ ಆಸೆಯಂತೆ ಸಿನಿಮಾದಲ್ಲಿ ಮುಂದುವರಿ ಯುತ್ತಿದ್ದೇನೆ’ ಎಂಬುದು ಗಾನವಿ ಮಾತು. ಅಂದಹಾಗೆ, ಭರತ್ ರಾಜ್ ನಿರ್ದೇಶನದ ‘ಹೀರೋ’ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಗಾನವಿ ಜೋಡಿಯಾಗಿದ್ದಾರೆ. ಚಿಕ್ಕಮಗಳೂರು ಸುತ್ತಮುತ್ತ 45 ದಿನಗಳಿಗೂ ಹೆಚ್ಚು ಕಾಲ ಚಿತ್ರದ ಶೂಟಿಂಗ್ ಮಾಡಲಾಗಿದೆ.

    ಸಿನಿಮಾದ ಒಂದೆಳೆ ಮಾತ್ರ ಹೇಳಿದ್ದರು. ಪೂರ್ತಿಯಾಘಿ ಕಥೆ ವಿವರಿಸಿರಲಿಲ್ಲ. ಬಳಿಕ ಒಂದೇ ವಾರದಲ್ಲಿ ಶೂಟಿಂಗ್ ಶುರುವಾಯ್ತು. ಶೂಟಿಂಗ್ ಸೆಟ್​ನಲ್ಲಿ ದಿನದಿಂದ ದಿನಕ್ಕೆ ಸರ್ಪ್ರೖೆಸ್ ವಿಚಾರಗಳೇ ಕಾಣಿಸಿದವು. ಅಚ್ಚುಕಟ್ಟಾದ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ.

    | ಗಾನವಿ ಲಕ್ಷ್ಮಣ ನಟಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts